alex Certify ಕೊರೊನಾ ಕಾಲದಲ್ಲಿ ಕಾಡ್ತಿರುವ ಆತಂಕಕ್ಕೆ ನಿಮ್ಮಲ್ಲೇ ಇದೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾಲದಲ್ಲಿ ಕಾಡ್ತಿರುವ ಆತಂಕಕ್ಕೆ ನಿಮ್ಮಲ್ಲೇ ಇದೆ ಮದ್ದು

ಒಂದು ವರ್ಷದಿಂದಲೂ ಜನರು ಮನೆಯಲ್ಲಿಯೇ ಕೆಲಸ ಮಾಡ್ತಿದ್ದಾರೆ. ಇದು ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಒಂದು ಕಡೆ ಕೊರೊನಾ ಹೆಚ್ಚಾಗ್ತಿರುವ ಆತಂಕವಾದ್ರೆ ಇನ್ನೊಂದು ಕಡೆ ಮನೆಯಲ್ಲಿ ಬಂದಿಯಾಗಿರುವ ಜನರಿಗೆ ಒತ್ತಡ, ಆತಂಕ ಶುರುವಾಗಿದೆ.

ಈ ಬೇಸಿಗೆ ರಜೆಯನ್ನು ಜನರು ಮನೆಯಲ್ಲಿ ಕಳೆಯುತ್ತಿದ್ದಾರೆ. ಕುಟುಂಬಸ್ಥರು, ಸ್ನೇಹಿತರಿಂದ ದೂರವಾಗಿರುವವರಿಗೆ ಅವರ ನೆನಪು ಬರ್ತಿದೆ. ಆತಂಕ, ಉದ್ವೇಗ, ಗೊಂದಲ, ಅನುಮಾನ, ಕಿರಿಕಿರಿ, ಕೋಪ ಮತ್ತು ದುಃಖ ಕಾಡ್ತಿದೆ. ಅನೇಕ ಜನರಿಗೆ ಮುಂದೆ ಏನು  ಮಾಡಬೇಕೆಂದು ಅರ್ಥವಾಗ್ತಿಲ್ಲ. ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕಾಗಿದೆ.

ಮಧುಮೇಹಿಗಳೂ ಕೂಡ ಖುಷಿಯಿಂದ ತಿನ್ನಬಹುದು ರಾಗಿ ಬರ್ಫಿ

ಅನೇಕ ಕಾರಣಗಳಿಗೆ ಕೋಪ ಬರ್ತಿದ್ದರೆ ಅದನ್ನು ನಿಯಂತ್ರಿಸಿಕೊಳ್ಳಿ. ಎಲ್ಲದಕ್ಕೂ ನಿಮ್ಮಿಂದ ಪರಿಹಾರವಿಲ್ಲ. ಕೆಲವೊಂದು ವಿಷ್ಯಗಳು ಯೋಚಿಸಿದಷ್ಟು ಸಮಸ್ಯೆ, ಕೋಪ ಹೆಚ್ಚಾಗುತ್ತದೆ. ನಿಮ್ಮ ಕೈಲಾದಷ್ಟು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ. ಮಾಡುವ ಕೆಲಸವನ್ನು ಮಾಡಿ. ಮಾಡಿದ ಕೆಲಸಕ್ಕೆ ಫಲಿತಾಂಶ ಬರಲೇಬೇಕೆಂಬ ನಿರೀಕ್ಷೆ ಬೇಡ.

ನಿಮ್ಮ ಜೊತೆ ಇರುವವರಿಗೆ ನಿಮ್ಮ ಭಾವನೆ ಅರ್ಥವಾಗುತ್ತದೆ. ಹಾಗಾಗಿ ನಿಮ್ಮ ಭಾವನೆಗಳನ್ನು ಕಟ್ಟಿಹಾಕುವ ಪ್ರಯತ್ನ ಬೇಡ. ನಿಮ್ಮ ಭಾವೆನಗಳನ್ನು ನಿಯಂತ್ರಿಸಿಕೊಂಡಲ್ಲಿ ಅದು ಮನಸ್ಸನ್ನು ಕೆಡಿಸುತ್ತದೆ. ನಿಮ್ಮ ಭಾವನೆಗಳನ್ನು ಹೊರ ಹಾಕಿದಾಗ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ ಮನೆಯವರಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಟೀ ಜೊತೆ ಅಪ್ಪಿತಪ್ಪಿಯೂ ಇದನ್ನು ಸೇವಿಸಬೇಡಿ

ಪ್ರತಿಯೊಬ್ಬರಿಗೂ ಪ್ರೀತಿ, ಸಹಾಯ ಬೇಕು. ಈ ಕಷ್ಟದ ಸಂದರ್ಭದಲ್ಲಿ ಪ್ರೀತಿ, ಔಷಧಿ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಸಂದರ್ಭದಲ್ಲಿ ಮನೆ ಸದಸ್ಯರು, ಸ್ನೇಹಿತರು, ಸಂಬಂಧಿಕರಿಗೆ ಪ್ರೀತಿ ನೀಡಿ. ಪ್ರತಿಯೊಬ್ಬರು ತಮ್ಮ ದುಃಖವನ್ನು ಬೇರೆಯವರು ಆಲಿಸಲಿ, ನಮ್ಮ ಸಮಸ್ಯೆಗೆ ಸ್ಪಂದಿಸಲಿ ಎಂದು ಬಯಸುತ್ತಾರೆ. ಅವರ ತಲೆಗೆ ನೀವು ಹೆಗಲಾದಾಗ ಅವರಿಗೆ ನೆಮ್ಮದಿ ಸಿಗುತ್ತದೆ. ಅವರ ನೆಮ್ಮದಿಯಲ್ಲಿ ನೀವು ಖುಷಿ ಕಾಣಬಹುದು.

ಮುಚ್ಚಿದ ಕೋಣೆಯಲ್ಲಿ ತಾಜಾ ಗಾಳಿಯ ಕೊರತೆ ಕಾಡುತ್ತದೆ. ಹಾಗಾಗಿ ಕೋಣೆ ಬಾಗಿಲುಗಳು ತೆರೆದಿರಬೇಕು. ಅಂತೆಯೇ ನಿಮ್ಮ ಮನಸ್ಸಿನ ಭಾವನೆಗಳನ್ನು ತೆರೆದಿಡಿ. ದುಃಖ, ಸಂತೋಷ ಎರಡನ್ನೂ ಹಂಚಿಕೊಳ್ಳಿ. ಎಲ್ಲರೂ ಕುಳಿತು ಒಟ್ಟಿಗೆ ಸಂತೋಷ ಹಂಚಿಕೊಳ್ಳಿ. ಇದ್ರಿಂದ ಪರಸ್ಪರರನ್ನು ಅರಿಯಬಹುದು. ಸಕಾರಾತ್ಮಕ ಬದಲಾವಣೆ ಕಾಣಬಹುದು.

ನಂಬಿಕೆ ಈಗ ಬಹಳ ಮುಖ್ಯ. ಆತ್ಮವಿಶ್ವಾಸ, ನಂಬಿಕೆಯಿಂದ ಜಗತ್ತನ್ನು ಗೆಲ್ಲಬಹುದು. ಈಗ ಕಷ್ಟದಲ್ಲಿರುವ ನೀವು ಮುಂದೊಂದು ದಿನ ಗೆಲ್ಲುವಿರೆಂಬ ವಿಶ್ವಾಸವಿರಲಿ. ಧಾರ್ಮಿಕ, ಆಧ್ಯಾತ್ಮಿಕದಲ್ಲಿ ನಂಬಿಕೆಯಿದ್ದರೆ ಅದಕ್ಕೆ ಹೆಚ್ಚಿನ ಸಮಯ ನೀಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...