alex Certify ನಾಲಿಗೆ ಸ್ವಚ್ಚ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲಿಗೆ ಸ್ವಚ್ಚ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಾವು ಆಹಾರಗಳನ್ನು ಸೇವಿಸುವುದರಿಂದ ನಾಲಿಗೆಯಲ್ಲಿ ಬಿಳಿ ಲೇಪನ ಉಂಟಾಗುತ್ತದೆ. ಇದನ್ನು ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಇದನ್ನು ನಿವಾರಿಸಲು ಈ ಮನೆಮದ್ದುಗಳನ್ನು ಬಳಸಿ.

* 1 ಚಮಚ ಅಡುಗೆ ಸೋಡಾಕ್ಕೆ ಕೆಲವು ಹನಿಗಳಷ್ಟು ನೀರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಬ್ರಷ್ ನಲ್ಲಿ ತೆಗೆದುಕೊಂಡು ನಾಲಗೆಯ ಮೇಲೆ ನಿಧಾನವಾಗಿ ಉಜ್ಜಿ. ಇದರಿಂದ ಬಿಳಿ ಲೇಪನ ಮಾಯವಾಗುತ್ತದೆ.

ಖಾಯಿಲೆಯಿಂದ ದೂರವಿರಲು ಈ ʼಆಹಾರʼ ಸೇವಿಸಿ

* 1 ಚಮಚ ಅರಶಿನ ಪುಡಿ, ಕೆಲವು ಹನಿ ನಿಂಬೆ ರಸ ವನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಬ್ರಷ್ ನಲ್ಲಿ ತೆಗೆದುಕೊಂಡು ನಾಲಗೆಯ ಮೇಲೆ ನಿಧಾನವಾಗಿ ಉಜ್ಜಿ. ಇದರಿಂದ ಬಿಳಿ ಲೇಪನ ನಿವಾರಣೆಯಾಗುತ್ತದೆ.

* ಸಮುದ್ರದ ಉಪ್ಪನ್ನು ಪುಡಿ ಮಾಡಿ ಅದನ್ನು ಬ್ರಷ್ ನಲ್ಲಿ ತೆಗೆದುಕೊಂಡು ನಾಲಗೆಯ ಮೇಲೆ ನಿಧಾನವಾಗಿ ಉಜ್ಜಿ ತೊಳೆದರೆ ನಾಲಿಗೆ ಸ್ವಚ್ಚವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...