alex Certify ರಾತ್ರಿ ಮಾತ್ರ ಯಾಕೆ ಹೋಗುತ್ತೆ ಮಂಗಳಮುಖಿಯರ ಶವಯಾತ್ರೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಾತ್ರ ಯಾಕೆ ಹೋಗುತ್ತೆ ಮಂಗಳಮುಖಿಯರ ಶವಯಾತ್ರೆ…..?

ಮಂಗಳಮುಖಿಯರು ಸಾಮಾನ್ಯರಂತೆ ಜೀವನ ನಡೆಸುವುದಿಲ್ಲ. ಅವರ ನಡೆ, ನುಡಿಯಿಂದ ಹಿಡಿದು ಜೀವನ ನಡೆಸುವ ವಿಧಾನ ಕೂಡ ಭಿನ್ನವಾಗಿರುತ್ತದೆ. ಜನನದಿಂದ ಹಿಡಿದು ಮರಣದವರೆಗೆ ಬೇರೆ ನಿಯಮಗಳನ್ನು ಅವರು ಪಾಲನೆ ಮಾಡ್ತಾರೆ.

ಸಾಮಾನ್ಯವಾಗಿ ಮಂಗಳಮುಖಿಯರು ಹೇಗಿರುತ್ತಾರೆನ್ನುವ ಬಗ್ಗೆ ಅನೇಕರು ನೋಡಿ, ಓದಿ ತಿಳಿದುಕೊಂಡಿರುತ್ತಾರೆ. ಆದ್ರೆ ಅವರ ಶವಯಾತ್ರೆ ನೋಡಿದವರ ಸಂಖ್ಯೆ ಮಾತ್ರ ಅಪರೂಪ.

ಮಂಗಳಮುಖಿಯರ ಸಮುದಾಯದಲ್ಲಿ ಶವವನ್ನು ಮುಚ್ಚಿಡಲಾಗುತ್ತದೆ. ಬೆಳಿಗ್ಗೆ ಎಂದೂ ಶವಯಾತ್ರೆ ಹೊರಡುವುದಿಲ್ಲ. ರಾತ್ರಿಯೇ ಶವದ ಅಂತ್ಯಸಂಸ್ಕಾರ ನಡೆಯುತ್ತದೆ. ಮಂಗಳ ಮುಖಿಯರ ಶವವನ್ನು ಯಾರೂ ನೋಡಬಾರದು ಎನ್ನುವ ಕಾರಣಕ್ಕೆ ರಾತ್ರಿ ಶವಯಾತ್ರೆ ನಡೆಸುತ್ತಾರೆ. ಅವರ ಸಮುದಾಯ ಬಿಟ್ಟು ಬೇರೆ ಸಮುದಾಯದ ಮಂಗಳಮುಖಿಯರೂ ಈ ಶವಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ.

ಸಮುದಾಯದಲ್ಲಿ ಸಾವಾದ್ರೆ ಯಾರೂ ಕಣ್ಣೀರು ಹಾಕುವುದಿಲ್ಲ. ಈ ನರಕ ಜೀವನದಿಂದ ಮುಕ್ತಿ ಸಿಕ್ಕಿದೆ ಎಂಬ ನಂಬಿಕೆ ಅವರದ್ದು. ಆಪ್ತರನ್ನು ಕಳೆದುಕೊಂಡ ದುಃಖ ಎಷ್ಟೇ ಇರಲಿ ಕಣ್ಣೀರು ಹಾಕದೆ ಸಂಭ್ರಮಿಸುತ್ತಾರೆ. ಹಣವನ್ನು ದಾನ ಮಾಡುತ್ತಾರೆ.

ಹಿಂದೂ ಧರ್ಮವನ್ನು ಪಾಲಿಸುವ ಮಂಗಳಮುಖಿಯರು ಸಾವಾದಾಗ ಶವಕ್ಕೆ ಚಪ್ಪಲಿ ಏಟು ನೀಡ್ತಾರೆ. ಎಲ್ಲ ಪಾಪ ಕಳೆಯಲಿ ಎಂಬುದು ಈ ಪದ್ಧತಿ ಹಿಂದಿನ ಉದ್ದೇಶ. ಶವವನ್ನು ಸುಡುವ ಬದಲು ಸಮಾಧಿ ಮಾಡ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...