alex Certify ಬದಲಾವಣೆಯ ಗಾಳಿಗೆ ತೆರೆದುಕೊಳ್ಳುವುದು ಹೇಗೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾವಣೆಯ ಗಾಳಿಗೆ ತೆರೆದುಕೊಳ್ಳುವುದು ಹೇಗೆ….?

ದಿನಾ ಒಂದು ರೀತಿ ಇದ್ದು ಇದ್ದು ಬೇಜಾರಾಗಿದ್ರೆ ನಿಮ್ಮ ಲೈಫ್ ಸ್ಟೈಲ್ ನಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವುದನ್ನು ಕಲಿಯಿರಿ. ಆಗ ಮನಸ್ಸಿಗೂ ಖುಷಿಯಾಗುತ್ತದೆ. ಮಾಡುವ ಕೆಲಸದ ಮೇಲೂ ಆಸಕ್ತಿ ಬರುತ್ತದೆ.

ಅಡುಗೆ, ತಿಂಡಿ, ಮನೆ- ಮಕ್ಕಳ ಜವಾಬ್ದಾರಿಯಿಂದ ಮನಸ್ಸು ಕೆಲವೊಮ್ಮೆ ಬೇಸತ್ತು ಹೋಗಿರುತ್ತದೆ. ತುಸು ಬದಲಾವಣೆಯ ಗಾಳಿ ಬೇಕು ಅನಿಸುತ್ತದೆ. ಯಾರೂ ನಮ್ಮ ಬದುಕನ್ನು ಬದಲಾಯಿಸಲ್ಲ. ಇರುವುದರಲ್ಲಿಯೇ ನಾವು ಖುಷಿ ಪಡುವುದನ್ನು ಕಲಿತರೆ ಮನಸ್ಸಿಗೆ ಆಗುವ ಕಿರಿಕಿರಿ ತಪ್ಪುತ್ತದೆ.

ಚರ್ಮದ ಶುಷ್ಕತೆಯನ್ನು ತೆಗೆದುಹಾಕಲು ಬಾಳೆಹಣ್ಣಿನ ಫೇಸ್ ಪ್ಯಾಕ್ ಬಳಸಿ

ನಿಮಗೆ ಅಡುಗೆ ತುಂಬಾ ಚೆನ್ನಾಗಿ ಮಾಡುವುದಕ್ಕೆ ಬರುತ್ತದೆಯಾದರೆ ಈಗ ಮನೆಯಲ್ಲಿ ಮಾಡಿಕೊಡುವ ಅಡುಗೆ/ ಮಸಾಲೆ ಪುಡಿಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಹುಡುಕಾಡಿದರೆ ನಿಮಗೆ ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಸಿಗುತ್ತದೆ. ನೀವು ಮನೆಯಿಂದ ಅಡುಗೆ ಮಾಡಿಕೊಟ್ಟು ನಿಮ್ಮ ಖರ್ಚಿಗಾಗುವಷ್ಟು ದುಡ್ಡು ಗಳಿಸಬಹುದು, ಮನಸ್ಸಿಗೂ ತುಸು ನೆಮ್ಮದಿ ತಂದುಕೊಳ್ಳಬಹುದು.

ಹಾಗೇ ನೀವು ಟೈಲರಿಂಗ್ ನಲ್ಲಿ ಪರಿಣಿತರಾಗಿದ್ದರೆ ಮನೆಯಲ್ಲಿಯೇ ಕುಳಿತು ಯೂ ಟ್ಯೂಬ್ ಚಾನೆಲ್ ಶುರು ಮಾಡಿ ಅದರಲ್ಲಿಯೇ ಕಲಿಸಬಹುದು. ನಿಮ್ಮ ಕೆಲಸದ ಜತೆಗೆ ಇನ್ನೊಂದು ಹೊಸ ಜಗತ್ತಿಗೆ ತೆಗೆದುಕೊಳ್ಳಬಹುದು.

ಇದೆಲ್ಲದರ ಜತೆಗೆ ಆಗಾಗ ಫ್ಯಾಮಿಲಿ ಜತೆ ಹೊರಗಡೆ ಹೋಗಿ ತುಸು ರಿಲ್ಯಾಕ್ಸ್ ಆಗಿ. ಒತ್ತಡಗಳಿಂದ ಹೊರಬರುವ ದಾರಿಗೆ ತೆರೆದುಕೊಳ್ಳಿ ಆಗ ಅವಕಾಶಗಳು ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...