alex Certify ರುಚಿಯಾದ ಅನಾನಸ್ – ತೆಂಗಿನ ಕಾಯಿ ಬರ್ಫಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಯಾದ ಅನಾನಸ್ – ತೆಂಗಿನ ಕಾಯಿ ಬರ್ಫಿ

ಅನಾನಸ್ ಆರೋಗ್ಯಕ್ಕೆ ಒಳ್ಳೆಯದು. ತೆಂಗಿನಕಾಯಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇವರೆಡನ್ನೂ ಸೇರಿಸಿ ಅನಾನಸ್ ತೆಂಗಿನಕಾಯಿ ಬರ್ಫಿ ಮಾಡಿ. ರುಚಿಯಾದ ಇದನ್ನು ಮಾಡೋದು ಸುಲಭ.

ಅನಾನಸ್ ತೆಂಗಿನಕಾಯಿ ಬರ್ಫಿಗೆ ಬೇಕಾಗುವ ಸಾಮಗ್ರಿ :

ತೆಂಗಿನಕಾಯಿ – 2 ಕಪ್

ಅನಾನಸ್ ಸ್ಲೈಸ್ – 4 ಕಪ್

ತುಪ್ಪ _ ಸ್ವಲ್ಪ

ಸಕ್ಕರೆ – 1 ಕಪ್

ಏಲಕ್ಕಿ ಪುಡಿ – 1 ಚಮಚ

ಅನಾನಸ್ ತೆಂಗಿನಕಾಯಿ ಬರ್ಫಿ ಮಾಡುವ ವಿಧಾನ :

ಒಂದು ನಾನ್ ಸ್ಟಿಕ್ ಪಾತ್ರೆಗೆ ತುಪ್ಪ ಹಾಗೂ ತೆಂಗಿನಕಾಯಿ ತುರಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಇನ್ನೊಂದೆಡೆ ಅನಾನಸ್ ಸ್ಲೈಸ್ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಅನಾನಸನ್ನು ತೆಂಗಿನಕಾಯಿ ತುರಿ ಜೊತೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಏಲಕ್ಕಿ ಪುಡಿ, ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಮಿಶ್ರಣ ಸರಿಯಾಗಿ ಮಿಕ್ಸ್ ಆಗುವವರೆಗೂ ಕೈ ಆಡಿಸಿ. ಬರ್ಫಿ ಹದಕ್ಕೆ ಬರ್ತಿದ್ದಂತೆ ಒಂದು ಪಾತ್ರೆಗೆ ತುಪ್ಪ ಹಾಕಿ ಅದ್ರ ಮೇಲೆ ಮಿಶ್ರಣವನ್ನು ಹಾಕಿ. ಹರಡಿದ ಮಿಶ್ರಣ ತಣ್ಣಗಾದ್ಮೇಲೆ ಕತ್ತರಿಸಿ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...