alex Certify ಮದುವೆ ನಂತ್ರ ಚೆಂದ ಕಾಣ್ತಿರುವ ಪತಿಗೆ ಕಾಡ್ತಿದೆ ಈ ಸಮಸ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ನಂತ್ರ ಚೆಂದ ಕಾಣ್ತಿರುವ ಪತಿಗೆ ಕಾಡ್ತಿದೆ ಈ ಸಮಸ್ಯೆ..!

ಮದುವೆ ನಂತ್ರ ಅನೇಕ ಸಮಸ್ಯೆಗಳು ಕಾಡುತ್ತವೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ದಂಪತಿ ಜೀವನ ನಡೆಸ್ತಾರೆ. ಮತ್ತೆ ಕೆಲವು ಬಗೆಹರಿಸಿಕೊಳ್ಳಲು ಸಾಧ್ಯವಾಗದ ಸಮಸ್ಯೆ ಬಂದಾಗ ದೂರವಾಗ್ತಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಹಂಚಿಕೊಂಡಿರುವ ಸಮಸ್ಯೆ ವಿಚಿತ್ರವಾಗಿದೆ.

ಅಮೆರಿಕಾದ ವ್ಯಕ್ತಿ 20ನೇ ವಯಸ್ಸಿನಲ್ಲಿಯೇ ಮದುವೆಯಾಗಿದ್ದಾನೆ. ಮದುವೆಗೆ ಮೊದಲು ಆತ ಕೆಟ್ಟದಾಗಿದ್ದನಂತೆ. ದಪ್ಪಗಿದ್ದ ಅವನಿಗೆ ಅನೇಕ ಚಟವಿತ್ತಂತೆ. ಯಾವ ಹುಡುಗಿಯೂ ಆತನ ಬಳಿ ಬರ್ತಿರಲಿಲ್ಲವಂತೆ. ಸಾಂಪ್ರದಾಯ ಕುಟುಂಬದ ಹುಡುಗ,20ನೇ ವಯಸ್ಸಿನಲ್ಲಿ ಮೊದಲ ಬಾರಿ ಸಂಬಂಧ ಬೆಳೆಸಿದ್ದನಂತೆ.ಅದೇ ಹುಡುಗಿಯನ್ನು ಮದುವೆಯಾಗಿದ್ದಾನಂತೆ.

ಮದುವೆಯಾಗಿ 10 ವರ್ಷ ಕಳೆದಿದೆ. ಇಬ್ಬರಿಗೆ ಮುದ್ದಾದ ಮಕ್ಕಳಿವೆ.ಮದುವೆ ನಂತ್ರ ವ್ಯಕ್ತಿ ಸಂಪೂರ್ಣ ಬದಲಾಗಿದ್ದಾನಂತೆ. ಆಹಾರದ ಬಗ್ಗೆ ಹೆಚ್ಚು ಗಮನ ನೀಡುವ ವ್ಯಕ್ತಿ,ಸ್ಲಿಮ್ ಆಗಿದ್ದಾನಂತೆ. ತುಂಬಾ ಸುಂದರವಾಗಿ ಕಾಣುವು ವ್ಯಕ್ತಿ ಎಲ್ಲ ಚಟದಿಂದ ದೂರವಿದ್ದಾನಂತೆ. ವ್ಯಕ್ತಿ ಸಂಪೂರ್ಣ ಆತ್ಮವಿಶ್ವಾಸದಲ್ಲಿ ಬದುಕುತ್ತಿದ್ದಾನಂತೆ. ಪೋರ್ನ್ ಉದ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಈಗೊಂದು ಸಮಸ್ಯೆ ಶುರುವಾಗಿದೆ.

ಆತನ ಪತ್ನಿ ಸ್ವಲ್ಪವೂ ಬದಲಾಗಿಲ್ಲವಂತೆ. ಮತ್ತಷ್ಟು ದಪ್ಪಗಾಗಿರುವ ಪತ್ನಿ,ಹೆಚ್ಚು ಧೂಮಪಾನ ಮಾಡ್ತಾಳಂತೆ. ಸೆಕ್ಸ್ ನಲ್ಲಿ ಆಕೆಗೆ ಆಸಕ್ತಿಯಿಲ್ಲವಂತೆ. ಆಕೆಯನ್ನು ಬದಲಿಸಲು ಸಾಕಷ್ಟು ಪ್ರಯತ್ನಪಟ್ಟು ಸೋತ ವ್ಯಕ್ತಿಗೆ ಈಗ ಪತ್ನಿ ಮೇಲೆ ಬೇಸರ ಶುರುವಾಗಿದೆ. ಆಕೆಯನ್ನು ಬಿಡಲು ಇಷ್ಟವಿಲ್ಲ. ಆಕೆಯನ್ನೂ ಈಗ್ಲೂ ಪ್ರೀತಿಸುತ್ತೇನೆ. ಆದ್ರೆ ಆಕೆಗೆ ಯಾವುದರಲ್ಲೂ ಆಸಕ್ತಿಯಿಲ್ಲ. ಹಾಗಾಗಿ ಪೋರ್ನ್ ಸ್ಟಾರ್ ಆಗುವು ಮೂಲಕ ನನ್ನ ಆಸೆ ತೀರಿಸಕೊಳ್ಳಲು ಬಯಸುತ್ತಿದ್ದೇನೆಂದು ಬರೆದಿದ್ದಾನೆ.

ಈತನ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ತಜ್ಞರು ಸಲಹೆ ಕೂಡ ನೀಡಿದ್ದಾರೆ. ನಿನ್ನ ಕೆಟ್ಟ ಸ್ಥಿತಿಯಲ್ಲಿ ಆಕೆ ನಿನಗೆ ಬೆಂಬಲ ನೀಡಿದ್ದಾಳೆ. ಈಗ ನಿನ್ನ ಸ್ಥಿತಿ ಸುಧಾರಿಸಿದೆ ಎಂಬ ಕಾರಣಕ್ಕೆ ಆಕೆಗೆ ಮೋಸ ಮಾಡುವುದು ತಪ್ಪು. ಪೋರ್ನ್ ಉದ್ಯಮ ಅಪಾಯಕಾರಿ. ಅಲ್ಲಿಂದ ಕೆಲ ಲೈಂಗಿಕ ಖಾಯಿಲೆ ಬರಬಹುದು. ಹಾಗಾಗಿ ಆಕೆ ಹೇಗಿದ್ದಾಳೋ ಹಾಗೆ ಆಕೆಯನ್ನು ಸ್ವೀಕರಿಸು ಎಂದು ಅನೇಕರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...