alex Certify ʼಕೊರೊನಾʼ ಲಕ್ಷಣಗಳಿದ್ದರೂ ವರದಿ ನೆಗೆಟಿವ್​ ಬರಲು ಕಾರಣವೇನು…? ಇಲ್ಲಿದೆ ಅದರ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಲಕ್ಷಣಗಳಿದ್ದರೂ ವರದಿ ನೆಗೆಟಿವ್​ ಬರಲು ಕಾರಣವೇನು…? ಇಲ್ಲಿದೆ ಅದರ ಮಾಹಿತಿ

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಡ್​, ಆಕ್ಸಿಜನ್​, ವೆಂಟಿಲೇಟರ್​ ಕೊರತೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡೋದು ವೈದ್ಯಲೋಕಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ನಡುವೆ ಎಲ್ಲ ಕೊರೊನಾ ಲಕ್ಷಣಗಳನ್ನ ಹೊಂದಿದ ಬಳಿಕವೂ ಕೆಲವರಿಗೆ ಕೊರೊನಾ ನೆಗೆಟಿವ್​ ರಿಪೋರ್ಟ್ ತೋರಿಸುತ್ತಿದ್ದು ಜನರನ್ನ ಗೊಂದಲಕ್ಕೆ ಈಡು ಮಾಡಿದೆ.

ದೇಶದಲ್ಲಿ ಕೊರೊನಾ ಕೇಸ್​ ಹೆಚ್ಚಾಗುತ್ತಿರೋದರ ಜೊತೆಗೆ ಕೊರೊನಾ ಪರೀಕ್ಷಾ ವರದಿ ನೀಡಲು ವಿಳಂಬ ಮಾಡ್ತಿರೋದಕ್ಕೂ ನಾವು ಸಾಕ್ಷಿಯಾಗುತ್ತಿದ್ದೇವೆ. ಕೊರೊನಾ ಎರಡನೇ ಅಲೆಯ ಭೀಕರತೆಯ ನಡುವೆಯೇ ಕೊರೊನಾ ವರದಿಯಲ್ಲಿ ವಿಳಂಬ ಹಾಗೂ ಸುಳ್ಳು ನೆಗೆಟಿವ್​ ವರದಿಗಳು ಕೊರೊನಾ ನಿರ್ವಹಣೆಯಲ್ಲಿ ದೇಶ ವಿಫಲವಾಗುತ್ತಿರೋದಕ್ಕೆ ಹಿಡಿದ ಕೈಗನ್ನಡಿ ಆಗಿದೆ.

ಆರ್​ಟಿ ಪಿಸಿಆರ್​ ಟೆಸ್ಟ್​​ಗಳು ಸೂಕ್ಷ್ಮ ರೀತಿಯಲ್ಲಿ ವೈರಸ್​ಗಳನ್ನ ಪತ್ತೆ ಮಾಡಲು ನೆರವಾಗುತ್ತವೆ. ಆದರೆ ಯಾವುದೇ ಪರೀಕ್ಷಾ ವಿಧಾನಗಳು 100 ಪ್ರತಿಶತ ನಿಖರ ಎಂದು ಹೇಳಲು ಆಗೋದಿಲ್ಲ.

ಸಂಶೋಧಕರು ಹೇಳುವ ಮಾಹಿತಿಯ ಪ್ರಕಾರ ಆರ್​ಟಿ – ಪಿಸಿಆರ್​ ಟೆಸ್ಟ್​ ವೈರಸ್​ ಪತ್ತೆ ಮಾಡುವಲ್ಲಿ ತುಂಬಾನೇ ಸಹಕಾರಿ. ಆದರೆ ವಿವಿಧ ಕಾರಣಗಳಿಂದಾಗಿ ಈ ಆರ್​ಟಿ ಪಿಸಿಆರ್​ ಟೆಸ್ಟ್​​ನ ನಿಖರತೆಯಲ್ಲಿ ವ್ಯತ್ಯಾಸ ಉಂಟಾಗುತ್ತೆ ಎಂದು ಅಂದಾಜಿಸಲಾಗಿದೆ.

ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಹೀಗೆ ಜನರು ತಪ್ಪಾದ ಪರೀಕ್ಷಾ ವರದಿಯನ್ನ ಹೊಂದುತ್ತಿರೋದು ನಿಜಕ್ಕೂ ಆಘಾತಕಾರಿ ಮಾಹಿತಿಯಾಗಿದೆ. ಇದರಿಂದ ಕೊರೊನಾ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ತಪ್ಪು ವರದಿಗಳಿಂದಾಗಿ ಸೋಂಕಿತನ ಚಿಕಿತ್ಸೆಯಲ್ಲಿ ವಿಳಂಬ ಆಗೋದು ಹಾಗೂ ಇದರಿಂದಾಗಿ ಸೌಮ್ಯ ಲಕ್ಷಣಗಳನ್ನ ಹೊಂದಿರುವ ವ್ಯಕ್ತಿ ಮುಂದೆ ಗಂಭೀರ ಲಕ್ಷಣಗಳಿಂದ ಬಳಲುವ ಸಾಧ್ಯತೆ ಹೆಚ್ಚಿರಲಿದೆ.

ಕೊರೊನಾ ಎರಡನೆ ಅಲೆಯಿಂದಾಗಿ ಪ್ರಯೋಗಾಲಯದ ಸಿಬ್ಬಂದಿಗೆ ಮೇಲೆ ಹೆಚ್ಚುತ್ತಿರುವ ಒತ್ತಡ ಹಾಗೂ ಹೆಚ್ಚೆಚ್ಚು ಪರೀಕ್ಷೆಗಳು ಈ ರೀತಿ ತಪ್ಪು ವರದಿ ಬರಲು ಕಾರಣವಾಗಿದೆ. ಆರ್​ಟಿ – ಪಿಸಿಆರ್​ ಟೆಸ್ಟ್​ಗಳು ಯಾವ ಸಮಯದಲ್ಲಿ ಗಂಟಲುದ್ರವ ಸಂಗ್ರಹ ಮಾಡಿದರು ಎಂಬ ಆಧಾರದ ಮೇಲೆಯೂ ನಿಂತಿರುತ್ತೆ. ಅಲ್ಲದೇ ಸರಿಯಾಗಿ ಸ್ವ್ಯಾಬ್​​ ಸಂಗ್ರಹ ಮಾಡದ ಸಂದರ್ಭದಲ್ಲಿ ಅಥವಾ ನಿಖರವಾದ ತಾಪಮಾನದಲ್ಲಿ ಸ್ವ್ಯಾಬ್​​ಗಳನ್ನ ಇಡದೇ ಹೋದಲ್ಲಿ ವೈರಾಣುಗಳನ್ನ ಪತ್ತೆ ಮಾಡೋದು ಕಷ್ಟವಾಗಲಿದೆ.

ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿ ವೈರಾಣುಗಳು ಇದ್ದಲ್ಲಿ ಪರೀಕ್ಷಾ ವರದಿ ನೆಗೆಟಿವ್​ ಬರುವ ಸಾಧ್ಯತೆ ಇದೆ. ಗುರುತಿಸಲು ಆಗದೇ ಇರುವಷ್ಟು ಕಡಿಮೆ ಪ್ರಮಾಣದಲ್ಲಿ ವೈರಸ್ ದೇಹದಲ್ಲಿ ಇದ್ದರೆ ನೆಗೆಟಿವ್​ ರಿಪೋರ್ಟ್ ಬರಬಹುದು.

ಸೋಂಕಿನ ಲಕ್ಷಣ ಶುರುವಾದ ಕೂಡಲೇ ಪರೀಕ್ಷೆ ಮಾಡಿಸಿದ್ರೂ ಒಮ್ಮೊಮ್ಮೆ ತಪ್ಪು ವರದಿ ಬರಬಹುದು. ಹೀಗಾಗಿ ಲಕ್ಷಣಗಳು ಕಾಣಿಸಿಕೊಂಡ 3- 4 ದಿನ ಐಸೋಲೇಟ್​ ಆಗಿ ಬಳಿಕ ಪರೀಕ್ಷೆಗೆ ಒಳಗಾಗೋದು ಉತ್ತಮ.

ಒಂದು ವೇಳೆ ಲಕ್ಷಣಗಳು ಇದ್ದ ಬಳಿಕವೂ ನಿಮ್ಮ ವರದಿಯಲ್ಲಿ ನೆಗೆಟಿವ್​ ಎಂದು ತೋರಿಸುತ್ತಿದ್ದರೆ ನೀವು ಮಾಡಬಹುದಾದ ಉತ್ತಮ ಕೆಲಸ ಅಂದರೆ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗುವುದು. ಅಲ್ಲದೇ ಎರಡನೇ ಪರೀಕ್ಷೆಯ ವರದಿಯ ಫಲಿತಾಂಶ ಬರುವವರೆಗೂ ಕ್ವಾರಂಟೈನ್​ನಲ್ಲೇ ಇರೋದು ಇನ್ನೂ ಸೂಕ್ತವಾಗಿದೆ.

ಅಲ್ಲದೇ ನಿತ್ಯ ನಿಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಗಮನವಿರಲಿ. ಎರಡನೇ ವರದಿ ಬರುವವರೆಗೂ ವೈದ್ಯರ ಸಂಪರ್ಕದಲ್ಲಿರಿ. ಸರಿಯಾದ ಚಿಕಿತ್ಸೆಯನ್ನ ಪಡೆಯುವುದು ಅವಶ್ಯಕವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...