alex Certify ಶೀತ, ಕಫದ ಸಮಸ್ಯೆ ಇದ್ದಾಗ ಈ ಆಹಾರದಿಂದ ದೂರವಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀತ, ಕಫದ ಸಮಸ್ಯೆ ಇದ್ದಾಗ ಈ ಆಹಾರದಿಂದ ದೂರವಿರಿ

ಬದಲಾಗುತ್ತಿರುವ ಹವಾಮಾನ ದೇಹದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತದೆ.

ಇದರಿಂದ ಶೀತ, ಕಫದಂತಹ ಸಾಮಾನ್ಯ ಕಾಯಿಲೆಗೆ ಗುರಿಯಾಗುತ್ತೇವೆ. ಅಂತಹ ಸಂದರ್ಭದಲ್ಲಿ ಇಂತಹ ಆಹಾರಗಳನ್ನು ಸೇವಿಸಬೇಡಿ.

-ಫ್ರೈಡ್ ಜಂಕ್ ಫುಡ್ ಗಳಲ್ಲಿ ಕೊಬ್ಬು ಮತ್ತು ಎಣ್ಣೆಯ ಅಂಶ ಹೆಚ್ಚಾಗಿರುತ್ತದೆ. ಇದು ಲೋಳೆಯ ಅಂಶದ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ನಿಮ್ಮ ಶೀತ, ಕಫದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಅದನ್ನು ಸೇವಿಸಿಬೇಡಿ.

-ಶೀತ, ಕಫದ ಸಮಸ್ಯೆ ಇದ್ದಾಗ ಹಾಲನ್ನು ಹೆಚ್ಚಾಗಿ ಬಳಸಬೇಡಿ. ಹಾಗೇ ಡೈರಿ ಉತ್ಪನ್ನಗಳನ್ನು ಹೆಚ್ಚು ಬಳಸಬೇಡಿ. ಇದರಿಂದ ಲೋಳೆ ಅಂಶ ಹೆಚ್ಚು ಉತ್ಪತ್ತಿಯಾಗುತ್ತದೆ.

-ಕಾಫಿ, ಟೀ ಮತ್ತು ತಂಪು ಪಾನೀಯಗಳು ಶೀತ, ಕಫವನ್ನು ಹೆಚ್ಚಾಗುವಂತೆ ಮಾಡುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಶೀತ ಇದ್ದಾಗ ಇವುಗಳ ಸೇವನೆಯನ್ನು ತಪ್ಪಿಸಿ.

-ಆಲ್ಕೋಹಾಲ್ ನಿಮ್ಮ ಬಿಳಿ ರಕ್ತದ ಕಣಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಈ ಸಮಸ್ಯೆ ಇದ್ದಾಗ ಇದನ್ನು ಸೇವಿಸಬೇಡಿ.

-ಸಕ್ಕರೆ, ಹಾಗೂ ಸಿಹಿಯಾದ ಪದಾರ್ಥಗಳು ಲೋಳೆ ಅಂಶಗಳ ಉತ್ಪತ್ತಿಗೆ ಸಹಕಾರಿಯಾಗಿವೆ. ಹಾಗಾಗಿ ಶೀತ, ಕಫ ಸಮಸ್ಯೆ ಇದ್ದಾಗ ಇದನ್ನು ಸೇವಿಸಿದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...