alex Certify ಫಿಟ್ ನೆಸ್ ಕಾಳಜಿ ಇರುವವರು ಪಾರ್ಟಿಯಲ್ಲಿ ಅತಿಯಾಗಿ ಸೇವಿಸಿದ ಬಳಿಕ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್ ನೆಸ್ ಕಾಳಜಿ ಇರುವವರು ಪಾರ್ಟಿಯಲ್ಲಿ ಅತಿಯಾಗಿ ಸೇವಿಸಿದ ಬಳಿಕ ಹೀಗೆ ಮಾಡಿ

ಮದುವೆ, ಹಾಗೂ ಇನ್ನಿತರ ಸಮಾರಂಭಕ್ಕೆ ಹೋದಾಗ ನಿಮಗಿಷ್ಟವಾದ ಆಹಾರವನ್ನು ಅತಿಯಾಗಿ ಸೇವಿಸುತ್ತೀರಿ. ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದೆಂಬ ಭಯ ಕಾಡುತ್ತದೆ. ಆದರೆ ಫಿಟ್ ನೆಸ್ ಬಗ್ಗೆ ಚಿಂತೆ ಇರುವವರು ಅತಿಯಾಗಿ ಆಹಾರ ಸೇವಿಸಿದ ಬಳಿಕ ಈ ನಿಯಮ ಪಾಲಿಸಿ.

*ಅತಿಯಾಗಿ ಆಹಾರ ಸೇವಿಸಿದ್ದರಿಂದ ತೂಕ ಹೆಚ್ಚಾಗುತ್ತದೆ ಎಂದು ಹೆಚ್ಚು ಚಿಂತಿಸಬೇಡಿ. ಒತ್ತಡಕ್ಕೆ ಒಳಗಾಗಬೇಡಿ. ಇದರಿಂದ ನಿಮ್ಮ ತೂಕ ಮತ್ತಷ್ಟು ಹೆಚ್ಚಾಗಬಹುದು. ಹಾಗಾಗಿ ಒತ್ತಡಕ್ಕೆ ಒಳಗಾಗದೆ ಸಕರಾತ್ಮಕವಾಗಿ ಯೋಚಿಸಿ.

*ಪಾರ್ಟಿಯಲ್ಲಿ ಇಷ್ಟಪಟ್ಟ ಆಹಾರ ಸೇವಿಸಿದ ಬಳಿಕ ಲಘ ವ್ಯಾಯಾಮ ಮಾಡಿ. ಓಟ, ವಾಕಿಂಗ್ ಇತ್ಯಾದಿ ಮಾಡಬಹುದು. ಇದರಿಂದ ನಿಮ್ಮ ಒತ್ತಡವು ಕಡಿಮೆಯಾಗುತ್ತದೆ, ತೂಕ ಹೆಚ್ಚಾಗುವುದನ್ನು ನಿಯಂತ್ರಿಸಬಹುದು.

*ಪಾರ್ಟಿಯಲ್ಲಿ ತಿಂದ ಮರುದಿನ ಅತಿ ಹೆಚ್ಚು ನೀರನ್ನು ಸೇವಿಸಿ. ಎಳನೀರು, ಜೀರಿಗೆ ಕಷಾಯ ಮುಂತಾದವುಗಳನ್ನು ಸೇವಿಸಿ. ಇದರಿಂದ ದೇಹದಲ್ಲಿ ಸೇರಿಕೊಂಡ ಕೊಬ್ಬು ಕರಗುತ್ತದೆ.

*ಹೆಚ್ಚು ಫೈಬರ್ ಯುಕ್ತ ಆಹಾರ ಸೇವಿಸಿ. ಇದು ನಿಮ್ಮ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ಪಾದಿಸುತ್ತದೆ. ಕರುಳಿನಲ್ಲಿ ಸೇರಿಕೊಂಡ ಅನಗತ್ಯ ವಸ್ತುಗಳನ್ನು ಹೊರಹಾಕುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...