alex Certify ನಿಮ್ಮನ್ನ ಕ್ಯಾನ್ಸರ್ ರೋಗದಿಂದ ರಕ್ಷಿಸುತ್ತೆ ಈ 5 ತರಕಾರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನ ಕ್ಯಾನ್ಸರ್ ರೋಗದಿಂದ ರಕ್ಷಿಸುತ್ತೆ ಈ 5 ತರಕಾರಿಗಳು

ಕ್ಯಾನ್ಸರ್ ಒಂದು ಜೀವಕ್ಕೆ ಮಾರಕವಾದ ಕಾಯಿಲೆ. ಇದು ಶುರುವಾದಾಗಲೇ ಚಿಕಿತ್ಸೆ ನೀಡಿದರೆ ಮಾತ್ರ ಇದರಿಂದ ಪಾರಾಗಬಹುದು. ಹಾಗಾಗಿ ಇಂತಹ ಮಾರಕವಾದ ಕಾಯಿಲೆ ಬರದಂತೆ ತಡೆಯಲು ಈ ನಿಮ್ಮ ಆಹಾರದಲ್ಲಿ ಈ 5 ತರಕಾರಿಯನ್ನು ಹೆಚ್ಚಾಗಿ ಸೇವಿಸಿ.

*ಟೊಮೆಟೊ : ಇದರಲ್ಲಿರುವ ಪೋಷಕಾಂಶಗಳು ಶ್ವಾಸಕೋಶದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಮತ್ಯು ಗರ್ಭಕೋಶದ ಕ್ಯಾನ್ಸರ್ ನ್ನು ತಡೆಯುತ್ತದೆ.

*ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನಮ್ಮನ್ನು ಕಾಯಿಲೆಗಳ ವಿರುದ್ಧ ಹೋರಾಡಿ ರಕ್ಷಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಗಂಧಕ ಗಡ್ಡೆಗಳು ಬೆಳೆಯದಂತೆ ಸಹಕರಿಸುತ್ತದೆ.

*ಕ್ಯಾರೆಟ್ : ಇದರಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಮಿಟಮಿನ್ ಇ ಅಧಿಕವಾಗಿದ್ದು, ಇದು ಗರ್ಭಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ನ್ನು ತಡೆಗಟ್ಟುತ್ತದೆ.

*ಹೂಕೋಸು : ಇದರಲ್ಲಿರುವ ಪೋಷಕಾಂಶ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಗಟ್ಟುತ್ತದೆ. ಹಾಗೇ ಇದು ದೇಹದಲ್ಲಿರುವ ವಿಷ ಅಂಶಗಳನ್ನುಹೊರಗೆ ಹಾಕುತ್ತದೆ.

*ಬೀನ್ಸ್ : ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು, ಇದು ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತದೆ, ಹಾಗಾಗಿ ವಾರದಲ್ಲಿ 3 ಬಾರಿ ತಪ್ಪದೇ ಬೀನ್ಸ್ ಸೇವನೆ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...