alex Certify ಕಾಳು ಮೆಣಸು, ಜೇನಿನಿಂದ ಕಡಿಮೆಯಾಗುತ್ತಾ ಕೊರೊನಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಳು ಮೆಣಸು, ಜೇನಿನಿಂದ ಕಡಿಮೆಯಾಗುತ್ತಾ ಕೊರೊನಾ…?

Black pepper and honey to prevent cough during winter ...

ಭಾರತದಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಅದ್ರ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆದಿದೆ. ಕೊರೊನಾಕ್ಕೆ ಇನ್ನೂ ಲಸಿಕೆ ಬಂದಿಲ್ಲ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾಗೆ ಮನೆ ಮದ್ದುಗಳನ್ನು ಹೇಳಲಾಗ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಪಾಂಡಿಚೇರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕೊರೊನಾಕ್ಕೆ ಮದ್ದು ಕಂಡು ಹಿಡಿದಿದ್ದಾನೆ ಎಂಬ ಸುದ್ದಿಯಿದು. 2 ಚಮಚ ಜೇನುತುಪ್ಪ ಮತ್ತು ಕೆಲವು ಶುಂಠಿ ರಸವನ್ನು 1 ಚಮಚ ಕರಿಮೆಣಸಿನ ಪುಡಿಯೊಂದಿಗೆ ಸತತ 5 ದಿನಗಳವರೆಗೆ ಸೇವಿಸುತ್ತ ಬಂದ್ರೆ ಕೊರೊನಾ ಪ್ರಭಾವ ಕಡಿಮೆಯಾಗುತ್ತದೆ ಎಂದು ಬರೆಯಲಾಗಿದೆ.

ಇಡೀ ವಿಶ್ವವು ಈ ಪರಿಹಾರವನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಅಂತಿಮವಾಗಿ 2020 ರಲ್ಲಿ ಒಂದು ಒಳ್ಳೆಯ ಸುದ್ದಿ !! ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಎಲ್ಲ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಎಂದು ಪೋಸ್ಟ್ ಹಾಕಲಾಗಿದೆ. ಆದ್ರೆ ಇದು ಸುಳ್ಳು ಸುದ್ದಿ ಎನ್ನಲಾಗ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿಲ್ಲ. ಗೂಗಲ್ ನಲ್ಲಿ ಕೂಡ ಪಾಂಡಿಚೇರಿ ವಿದ್ಯಾರ್ಥಿ ಬಗ್ಗೆ ಯಾವುದೇ ಸುದ್ದಿಯಿಲ್ಲ.

ಜೇನುತುಪ್ಪ, ಕರಿಮೆಣಸು ಮತ್ತು ಶುಂಠಿಯನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿದ್ದರೂ, ಅವು COVID-19 ಅನ್ನು ಗುಣಪಡಿಸುತ್ತವೆ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆಗಳಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...