alex Certify ಒಡೆದ ಹಿಮ್ಮಡಿಯಿಂದ ಮುಜುಗರವೇ…..? ಈ ʼಮನೆ ಮದ್ದುʼ ಟ್ರೈ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡೆದ ಹಿಮ್ಮಡಿಯಿಂದ ಮುಜುಗರವೇ…..? ಈ ʼಮನೆ ಮದ್ದುʼ ಟ್ರೈ ಮಾಡಿ

ಮುಖ ಹಾಗೂ ಕೈಗಳಂತೆಯೇ ಕಾಲಿಗೂ ಕೂಡ ಆರೈಕೆಯ ಅಗತ್ಯವಿರುತ್ತದೆ. ಕಾಲು ಒಡೆಯವ ಸಮಸ್ಯೆ ಇದ್ದರೆ ಅದರ ನೋವು ಒಂದೆಡೆಯಾದರೆ ನಿಮಗಿಷ್ಟದ ಚಪ್ಪಲಿಗಳನ್ನ ಹಾಕಲು ಸಾಧ್ಯವಿಲ್ಲ ಅನ್ನೋ ನೋವು ಮತ್ತೊಂದಡೆ. ಈ ಸಮಸ್ಯೆಯಿಂದ ಪಾರಾಗಬೇಕು ಅಂದರೆ ನೀವು ಈ ಮನೆಮದ್ದುಗಳನ್ನ ಟ್ರೈ ಮಾಡಬಹುದು.

ಮೃದುವಾದ ಹಿಮ್ಮಡಿ ಹೊಂದಬೇಕು ಅನ್ನೋ ಆಸೆ ಯಾರಿಗ್​ ತಾನೇ ಇರೋದಿಲ್ಲ ಹೇಳಿ. ಇದಕ್ಕಾಗಿ ನೀವು ಒಂದು ಟಬ್​ನಲ್ಲಿ ಬೆಚ್ಚನೆಯ ನೀರಿಗೆ ನಿಮ್ಮಷ್ಟದ ಶಾಂಪೂ ಹಾಕಿ ನೊರೆ ತರಿಸಿಕೊಳ್ಳಿ. ಇದಕ್ಕೆ 100 ಎಂಎಲ್​​ ಸಾಸಿವೆ ಎಣ್ಣೆ, 500 ಮಿ.ಲೀ ದಪ್ಪನೆಯ ಹಾಲು, ಒಂದು ಮುಷ್ಟಿ ಗುಲಾಬಿ ಹೂವಿನ ದಳ, ಕಹಿ ಬೇವಿನ ಎಲೆ ಹಾಗೂ 5 ಹನಿ ಶ್ರೀಗಂಧದ ಎಣ್ಣೆ ಹಾಕಿ. ಈ ಎಲ್ಲವನ್ನ ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಕಾಲನ್ನ 20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ಈ ರೀತಿ ಮಾಡೋದ್ರಿಂದ ಕಾಲಿನಲ್ಲಿರುವ ಎಲ್ಲಾ ಡೆಡ್​ ಸ್ಕಿನ್​ಗಳು ನಾಶವಾಗಲಿದೆ.

ಇದನ್ನ ಬಿಟ್ಟರೆ ನೀವು ಪ್ರತಿದಿನ ಒಂದು 3 ಚಮಚ ಸಕ್ಕರೆಯಲ್ಲಿ 1 ನಿಂಬೆ ಹೋಳನ್ನ ಅಂಟಿಸಿ ಇದರಲ್ಲಿಂದ ಕಾಲನ್ನ ಸ್ಕ್ರಬ್​ ಮಾಡಿ, ಬಳಿಕ ಸ್ವಚ್ಛ ನೀರಿನಲ್ಲಿ ಕಾಲನ್ನ ತೊಳೆದುಕೊಳ್ಳಿ. ಇದರಿಂದ ನಿಮ್ಮ ಪಾದ ಫಳ ಫಳ ಅಂತಾ ಹೊಳೆಯೋದು ಪಕ್ಕಾ.

ಅಲೋವೇರಾ ಜೆಲ್​ನಲ್ಲಿ ಆಂಟಿ ಬ್ಯಾಕ್ಟೀರಿಯಾ ಅಂಶವಿದೆ. ಹೀಗಾಗಿ ನೀವು ರಾತ್ರಿ ಮಲಗುವ ಮುನ್ನ ಒಡೆದ ಕಾಲಿಗೆ ಆಲೋವೇರಾ ಜೆಲ್​ನ್ನು ಚೆನ್ನಾಗಿ ಲೇಪಿಸಿ ಮಲಗಿ. ಈ ರೀತಿ ಮಾಡುವ ಮುನ್ನ ಕಾಲನ್ನ ಸ್ವಚ್ಛ ನೀರಿನಿಂದ ತೊಳೆದು ಶುಭ್ರ ಟವೆಲ್​ನಿಂದ ಪಾದಗಳನ್ನ ಒರೆಸಿಕೊಳ್ಳೋದನ್ನ ಮರೆಯುವಂತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...