alex Certify ‘ಆಯಿಲ್‌ ಸ್ಕಿನ್‌’ ಹೋಗಲಾಡಿಸಲು ಇಲ್ಲಿವೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಯಿಲ್‌ ಸ್ಕಿನ್‌’ ಹೋಗಲಾಡಿಸಲು ಇಲ್ಲಿವೆ ಮನೆ ಮದ್ದು

ಎಣ್ಣೆ ತ್ವಚೆ ಅಥವಾ ಆಯಿಲ್‌ ಸ್ಕಿನ್‌ ಇರುವವರು ಮುಖದ ಆರೈಕೆ ಕಡೆ ಗಮನ ಕೊಡದಿದ್ದರೆ ಮುಖ ಮಂಕಾಗಿ ಕಾಣುವುದು. ಮುಖ ಕಳೆ-ಕಳೆಯಾಗಿ ಕಾಣಲು ಈ ಬ್ಯೂಟಿ ಟಿಪ್ಸ್ ಪಾಲಿಸಿದರೆ ಒಳ್ಳೆಯದು.

* ದಿನದಲ್ಲಿ ಎರಡು ಬಾರಿ ಮುಖ ತೊಳೆಯಬೇಕು. ಹೆಚ್ಚು ರಾಸಾಯನಿಕ ಇರುವ ಸೋಪು ಬದಲು ಕಡಲೆ ಹಿಟ್ಟು ಮುಂತಾದ ನೈಸರ್ಗಿಕ ವಸ್ತುಗಳಿಂದ ಮುಖದ ಆರೈಕೆ ಮಾಡುವುದು ಒಳ್ಳೆಯದು.

* ಮುಖದಲ್ಲಿ ಜಿಡ್ಡಿನಂಶ ಅಧಿಕವಿದ್ದರೆ ಬ್ಲೋಟಿಂಗ್‌ ಪೇಪರ್‌ ಬಳಸಿ ಒರೆಸಬೇಕು. ಹೀಗೆ ಮಾಡುವುದರಿಂದ ಮುಖ ಫ್ರೆಶ್‌ ಆಗಿ ಕಾಣುವುದು.

* ಮುಖಕ್ಕೆ ಜೇನು ತುಪ್ಪ ಹಚ್ಚಿ, ನಂತರ ಮುಖ ತೊಳೆದರೆ ಮುಖದ ಹೊಳಪು ಹೆಚ್ಚುವುದು.

* ವಾರಕ್ಕೊಮ್ಮೆ ಮೊಟ್ಟೆಯ ಬಿಳಿಯನ್ನು ಮುಖಕ್ಕೆ ಹಚ್ಚಿ, ಅದು ಒಣಗಿದ ಮೇಲೆ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ಮುಖ ಫ್ರೆಶ್ ಆಗಿ ಕಾಣುವುದು.

* ಮೊಟ್ಟೆಯ ಬಿಳಿ ಬಾಗಕ್ಕೆ ನಿಂಬೆರಸ ಮಿಕ್ಸ್ ಮಾಡಿ ಹಚ್ಚಿದರೆ ಮೊಡವೆ ಸಮಸ್ಯೆಯೂ ಕಡಿಮೆಯಾಗುತ್ತದೆ.

* ಬಾದಾಮಿಯನ್ನು ತರಿತರಿಯಾಗಿ ಪುಡಿ ಮಾಡಿ, ಅದಕ್ಕೆ ಜೇನು ತುಪ್ಪ ಮಿಕ್ಸ್ ಮಾಡಿ ಸ್ಕ್ರಬ್ ರೀತಿ ಬಳಸಬಹುದು.

* ಕ್ರೀಮ್ ರೀತಿಯ ಮೇಕಪ್ ವಸ್ತುಗಳ ಬದಲು ಆಯಿಲ್‌ ಫ್ರೀ ಅಥವಾ ಪೌಡರ್‌ ರೀತಿಯ ಮೇಕಪ್‌ ಬಳಸುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...