alex Certify ದೇಹ ತೂಕ ಇಳಿಸಿಕೊಳ್ಳಲು ಬಯಸುವವರು ಅನುಸರಿಸಿ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹ ತೂಕ ಇಳಿಸಿಕೊಳ್ಳಲು ಬಯಸುವವರು ಅನುಸರಿಸಿ ಈ ವಿಧಾನ

ದೇಹದ ತೂಕವನ್ನು ಕಡಿಮೆ ಮಾಡುವ ಸರಳ ಪಾನೀಯ ಮಾಡುವ ವಿಧಾನವೊಂದನ್ನು ತಿಳಿಯೋಣ. ಈ ಪಾನೀಯಕ್ಕೆ ಬೇಕಾದ ಪದಾರ್ಥಗಳು ಕೊತ್ತಂಬರಿ ಸೊಪ್ಪು ಒಂದು ಕಟ್ಟು, ಬೆಳ್ಳುಳ್ಳಿ ಎರಡು ಎಸಳು, ಚೆಕ್ಕೆ ಪುಡಿ ಅರ್ಧ ಚಮಚ, ಕರಿಬೇವು 10 ಎಲೆಗಳು, ನಿಂಬೆಹಣ್ಣಿನ ರಸ ಎರಡು ಚಮಚ, ಜೇನುತುಪ್ಪ ಎರಡು ಚಮಚ.

ಈಗ ತಯಾರಿ ಮಾಡುವ ವಿಧಾನ, ಮೊದಲಿಗೆ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿ ಮಿಕ್ಸಿ ಜಾರಿನಲ್ಲಿ ಹಾಕಿ. ಎರಡು ಬೆಳ್ಳುಳ್ಳಿ, ಅರ್ಧ ಚಮಚ ಚೆಕ್ಕೆ ಪುಡಿ, 10 ಕರಿಬೇವಿನ ಎಲೆ, ಎರಡು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಸಣ್ಣಗೆ ರುಬ್ಬಿ.

ಅದಕ್ಕೆ ಬೇಕಾದಷ್ಟು ಬಿಸಿ ನೀರನ್ನು ಹಾಕಿ ಪಾನೀಯ ತಯಾರಿಸಿ. ಹೆಚ್ಚು ರುಚಿಗಾಗಿ ಜೇನುತುಪ್ಪವನ್ನು ಹಾಕಿ ಕುಡಿಯಬಹುದು. ಪ್ರತಿದಿನ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...