alex Certify ಎಣ್ಣೆ ತ್ವಚೆಯಾ….? ಚಿಂತೆ ಬಿಟ್ಟುಬಿಡಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಣ್ಣೆ ತ್ವಚೆಯಾ….? ಚಿಂತೆ ಬಿಟ್ಟುಬಿಡಿ…..!

Papaya Face Packs & Masks For Fairness, Glow, Pimples & Acneಎಣ್ಣೆ ಚರ್ಮದ ಸಮಸ್ಯೆ ಮೇಕಪ್ ಮಾಡುವಾಗ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮುಖದ ಮೇಲೆ ಎಣ್ಣೆಯ ಅಂಶ ಹೆಚ್ಚಾಗಿ ಕಾಣುವುದರಿಂದ ಮುಖದ ಅಂದವು ಹಾಳಾಗುತ್ತದೆ.

ಮುಖದಲ್ಲಿ ಎಣ್ಣೆಯಂಶ ಹೆಚ್ಚಿದಂತೆ ನಿಮ್ಮ ವಯಸ್ಸು ದ್ವಿಗುಣವಾದಂತೆ ಕಾಣುತ್ತದೆ. ಎಣ್ಣೆಯೊಂದಿಗೆ ಧೂಳು ಬೆರೆತು ಮೊಡವೆ ಕಾಣಿಸಿಕೊಳ್ಳುತ್ತದೆ. ಈ ಎಣ್ಣೆ ಅಂಶ ಮುಖದ ಮೇಲೆ ಹೆಚ್ಚಿನ ಮಟ್ಟದಲ್ಲಿ ಇರಬಾರದು. ಮತ್ತು ಕಡಿಮೆಯೂ ಆಗಬಾರದು. ಇದಕ್ಕೊಂದು ಫೇಸ್ ಪ್ಯಾಕ್ ತಿಳಿದುಕೊಳ್ಳೋಣ.

ಬಾಳೆಹಣ್ಣನ್ನು ಕೈಯಿಂದ ಹಿಸುಕಿ ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ. ಜೊತೆಗೆ ನಿಂಬೆರಸ ಸೇರಿಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ಬಳಿಕ ಮುಖವನ್ನು ತೊಳೆಯಿರಿ. ಇದರಿಂದ ಎಣ್ಣೆಯ ಅಂಶ ನಿವಾರಣೆಯಾಗುತ್ತದೆ. ಜೊತೆಗೆ ಮುಖದ ಸೌಂದರ್ಯ ಹೆಚ್ಚಾಗುತ್ತದೆ.

ಪಪ್ಪಾಯಿ ಹಣ್ಣು ಮತ್ತು ಕಲ್ಲಂಗಡಿ ಹಣ್ಣುಗಳಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಎಣ್ಣೆಯ ಚರ್ಮ ನಿವಾರಣೆಯಾಗುತ್ತದೆ.
ದಿನಕ್ಕೆ ಎರಡರಿಂದ ಮೂರು ಬಾರಿ ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆಯುವುದರಿಂದ ಮುಖದಲ್ಲಿ ಆವರಿಸಿರುವ ಎಣ್ಣೆಯ ಅಂಶ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...