alex Certify ಏನಿದು ಮಿಂತ್ರಾ ಲೋಗೋ ವಿವಾದ…? ಇಲ್ಲಿದೆ ನೋಡಿ ಸಂಪೂರ್ಣ ಪ್ರಕರಣದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏನಿದು ಮಿಂತ್ರಾ ಲೋಗೋ ವಿವಾದ…? ಇಲ್ಲಿದೆ ನೋಡಿ ಸಂಪೂರ್ಣ ಪ್ರಕರಣದ ಮಾಹಿತಿ

ಆನ್​ಲೈನ್​ ಫ್ಯಾಶನ್​ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಇ ಕಾಮರ್ಸ್ ದೈತ್ಯ ಮಿಂತ್ರಾ ಇದೀಗ ತನ್ನ ಲೋಗೋವನ್ನ ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದಿದೆ. ಮುಂಬೈನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮಿಂತ್ರಾ ಲೋಗೋದಲ್ಲಿನ ದೋಷದ ಬಗ್ಗೆ ಸೈಬರ್​ ಕ್ರೈಂ ಅಧಿಕಾರಿಗಳಿಗೆ ದೂರನ್ನ ನೀಡಿದ್ದರು. ಈ ಸಂಬಂಧ ಮಿಂತ್ರಾ ಲೋಗೋ ಬದಲಾವಣೆ ನಿರ್ಧಾರ ಕೈಗೊಂಡಿದೆ.

ಅವೇಸ್ತಾ ಫೌಂಡೇಶನ್​ ಎಂಬ ಎನ್​ಜಿಓದ ಸ್ಥಾಪಕಿ ನಾಜ್​ ಪಟೇಲ್​ ಕಳೆದ ವರ್ಷ ಡಿಸೆಂಬರ್​​ನಲ್ಲಿ ಮಿಂತ್ರಾ ವಿರುದ್ಧ ದೂರನ್ನ ದಾಖಲಿಸಿದ್ದರು. ಮಿಂತ್ರಾ ಕಂಪನಿಯ ಲೋಗೋ ಬೆತ್ತಲೆ ಮಹಿಳೆಗೆ ಹೋಲಿಕೆ ಮಾಡಿದಂತಿದೆ. ಇದರಿಂದ ಮಹಿಳೆಯರ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ್ದರು.

PNB ಗ್ರಾಹಕರಿಗೆ ಸಿಹಿ ಸುದ್ದಿ: ಬ್ಯಾಂಕ್ ನೀಡ್ತಿದೆ ಪ್ರತಿ ತಿಂಗಳು 30 ಸಾವಿರ ಗಳಿಸುವ ಅವಕಾಶ

ಈ ಸಂಬಂಧ ಮುಂಬೈ ಸೈಬರ್​ ಕ್ರೈಂ ವಿಭಾಗ ಮಿಂತ್ರಾಗೆ ಮೇಲ್​ ಕಳಿಸಿತ್ತು. ಹಾಗೂ ದೂರಿನ ಬಗ್ಗೆ ಉಲ್ಲೇಖ ಮಾಡಿತ್ತು. ಸೈಬರ್​ ಕ್ರೈಂ ಇಲಾಖೆಯ ಇ ಮೇಲ್​ಗೆ ಸ್ಪಂದಿಸಿದ ಮಿಂತ್ರಾ ತಮ್ಮ ಇಮೇಲ್​ ಬದಲಾವಣೆ ಮಾಡೋದಾಗಿ ಹೇಳಿದೆ.

ಹೀಗಾಗಿ ಮಿಂತ್ರಾ ಹೊಸ ಲೋಗೋದ ಹುಡುಕಾಟದಲ್ಲಿದೆ. ತನ್ನ ಅಪ್ಲಿಕೇಶನ್, ವೆಬ್​ಸೈಟ್​ ಹಾಗೂ ಡೆಲಿವರಿ ಪ್ಯಾಕೆಜಿಂಗ್​​ಗಳಲ್ಲಿ ಶೀಘ್ರದಲ್ಲೇ ಮಿಂತ್ರಾ ಲೋಗೋ ಬದಲಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...