alex Certify ಹಣ್ಣುಗಳ ವರ್ಗೀಕರಣಕ್ಕೆ ಇಲ್ಲಿದೆ ಸಿಂಪಲ್ ಟೆಕ್ನಿಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ್ಣುಗಳ ವರ್ಗೀಕರಣಕ್ಕೆ ಇಲ್ಲಿದೆ ಸಿಂಪಲ್ ಟೆಕ್ನಿಕ್

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರು ದಿನನಿತ್ಯದ ಬದುಕಲ್ಲಿ ಅನುಸರಿಸುವ ವಿವಿಧ ಟೆಕ್ನಿಕ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರಮಾಣ ಹೆಚ್ಚಾಗಿತ್ತು.

ಇದೀಗ ರೈತನೊಬ್ಬ ತಾನು ಬೆಳೆದ ಹಣ್ಣುಗಳನ್ನು ಗಾತ್ರಕ್ಕೆ ಅನುಗುಣವಾಗಿ ವಿಂಗಡಿಸುವ ಟೆಕ್ನಿಕ್ ನ ವಿಡಿಯೋ ವೈರಲ್ ಆಗಿದೆ.

ಉದ್ಯಮಿ ವಾಲಾ ಅಪ್ಸರ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಪ್ರಪಂಚದ ಅತ್ಯಂತ ಸರಳವಾದ ವರ್ಗೀಕರಣ ವ್ಯವಸ್ಥೆ ಎಂದು ಶೀರ್ಷಿಕೆ ನೀಡಿದ್ದಾರೆ.

ದಾಳಿಂಬೆ ಹಣ್ಣಿನ ರಾಶಿ ಮಧ್ಯ ಕುಳಿತ ರೈತನೊಬ್ಬ ಅದನ್ನು ವರ್ಗೀಕರಿಸಲು, 2 ಕಬ್ಬಿಣದ ರಾಡ್ ಬಳಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

4 ಬಾಕ್ಸ್ ನ ಮೇಲೆ 2 ಕಬ್ಬಿಣದ ರಾಡುಗಳನ್ನು ಸಮಾನಾಂತರವಲ್ಲದ ರೀತಿಯಲ್ಲಿ ಇಡಲಾಗಿದ್ದು, ದೊಡ್ಡ ಗಾತ್ರದ ಹಣ್ಣು ಕೊನೆಯ ಬಾಕ್ಸ್ ಮೇಲೆ, ಸಾಮಾನ್ಯ ಗಾತ್ರದ ಹಣ್ಣು ಅನಂತರದ ಬಾಕ್ಸ್ ಗಳಲ್ಲಿ, ಸಣ್ಣ ಹಣ್ಣುಗಳಿದ್ದರೆ ಮೊದಲ ಬಾಕ್ಸ್ ನಲ್ಲಿ ಬೀಳುವಂತೆ ಒಂದೊಂದೇ ಹಣ್ಣನ್ನು ಎತ್ತರದಿಂದ ಬಿಡಲಾಗುತ್ತದೆ. ಸಹಜವಾಗಿ ಈ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 1.8 ಲಕ್ಷ ಜನ ವೀಕ್ಷಿಸಿದ್ದಾರೆ 44000 ಮಂದಿ ಲೈಕಿಸಿದ್ದು, 15000 ರೀ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...