alex Certify ಗಮನಿಸಿ: ಬೆಳಿಗ್ಗೆ 1ರಿಂದ 3 ರ ವರೆಗೆ ಯುಪಿಐ ಸೇವೆಯಲ್ಲಿ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಬೆಳಿಗ್ಗೆ 1ರಿಂದ 3 ರ ವರೆಗೆ ಯುಪಿಐ ಸೇವೆಯಲ್ಲಿ ವ್ಯತ್ಯಯ

ಮುಂದಿನ ಎರಡು ದಿನಗಳ ಮಟ್ಟಿಗೆ ಯುಪಿಐ ಪಾವತಿ ವ್ಯವಸ್ಥೆಯು ಬೆಳಗ್ಗಿನ ಜಾವ 1 ರಿಂದ 3 ಗಂಟೆವರೆಗೂ ಸರಿಯಾಗಿ ಕೆಲಸ ಮಾಡದೇ ಇರುವ ಸಾಧ್ಯತೆ ಇದೆ ಎಂದು ಎನ್‌ಪಿಸಿಐ ತಿಳಿಸಿದೆ.

“ಯುಪಿಐ ವಹಿವಾಟುಗಳು ಹೆಚ್ಚುತ್ತಿರುವ ಕಾರಣ ಸೂಕ್ತವಾದ ಮೂಲಸೌಕರ್ಯ ಕಲ್ಪಿಸಲು ಮುಂದಿನ ಕೆಲ ದಿನಗಳ ಮಟ್ಟಿಗೆ, ಬೆಳಗ್ಗಿನ ಜಾವ 1ರಿಂದ 3ರವರೆಗೆ ಯುಪಿಐ ಪ್ಲಾಟ್‌ಫಾರಂ ಮೇಲ್ದರ್ಜೆಗೇರಿಸುವ ಕೆಲಸ ಚಾಲನೆಯಲ್ಲಿ ಇರಲಿದೆ” ಎಂದು ಎನ್‌ಪಿಸಿಐ ಟ್ವೀಟ್ ಮಾಡಿದೆ.

ಮೇಲ್ಕಂಡ ಪ್ರಕ್ರಿಯೆಯಿಂದ ಯಾವುದೇ ಅನಾನುಕೂಲತೆಗಳು ಆಗದೇ ಇರಲು, ಆನ್ಲೈನ್ ವಹಿವಾಟುಗಳನ್ನು ಮುಂಚಿತವಾಗಿಯೇ ಯೋಜಿಸಲು ಬಳಕೆದಾರರಿಗೆ ಸೂಚಿಸಲಾಗಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಗಳಾದ ಗೂಗಲ್ ಪೇ, ಫೋನ್‌ಪೇಗಳೂ ಸಹ ಯುಪಿಐ ವ್ಯವಸ್ಥೆಯ ಮೇಲೆಯೇ ಕೆಲಸ ಮಾಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...