alex Certify GST update: ಮಾರ್ಚ್ 1 ರಿಂದ ಇ-ಇನ್ ವಾಯ್ಸ್ ಕಡ್ಡಾಯಗೊಳಿಸಿದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GST update: ಮಾರ್ಚ್ 1 ರಿಂದ ಇ-ಇನ್ ವಾಯ್ಸ್ ಕಡ್ಡಾಯಗೊಳಿಸಿದ ಸರ್ಕಾರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(GST) ಅಡಿಯಲ್ಲಿ ನೋಂದಾಯಿಸಿಕೊಂಡು ವಾರ್ಷಿಕ 5 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ಉದ್ದಿಮೆಗಳು ಬಿ2ಬಿ ವಹಿವಾಟುಗಳಿಗೆ ಇ-ಇನ್ ವಾಯ್ಸ್ ಸೃಷ್ಟಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಮಾರ್ಚ್ 1ರಿಂದ ಇದು ಜಾರಿಗೆ ಬರಲಿದೆ. 50,000 ರೂ.ಗಿಂತ ಹೆಚ್ಚು ಮೌಲ್ಯದ ಸರಕುಗಳ ಅಂತರ ರಾಜ್ಯ ಸಾಗಾಟಕ್ಕೆ ಜಿ.ಎಸ್.ಟಿ. ಅಡಿಯಲ್ಲಿ ಇ-ವೇ ಬಿಲ್ ಪಡೆಯುವುದು ಕಡ್ಡಾಯವಾಗಿರುತ್ತದೆ.

ಹೀಗಿದ್ದರೂ, ಕೆಲವು ಜಿ.ಎಸ್.ಟಿ. ತೆರಿಗೆದಾರರು ಬಿ2ಬಿ, ಬಿ2ಇ ವಹಿವಾಟುಸಗಳಿಗೆ ಇ-ಇನ್ ವಾಯ್ಸ್ ಸೇರ್ಪಡೆ ಮಾಡದೇ ಇ-ವೇ ಬಿಲ್ ಸೃಷ್ಟಿಸುತ್ತಿರುವುದು ಕಂಡುಬಂದಿದೆ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ ಮಾಹಿತಿ ನೀಡಿದೆ.

ಕೆಲವು ಪ್ರಕರಣಗಳಲ್ಲಿ ಇನ್ ವಾಯ್ಸ್ ಮಾಹಿತಿಯನ್ನು ಇ-ವೇ ಬಿಲ್ ನಲ್ಲಿ ಪ್ರತ್ಯೇಕವಾಗಿ ನಮೂದಿಸಲಾಗುತ್ತಿದೆ. ಇಂತಹ ಇ-ವೇ ಬಿಲ್ ಮತ್ತು ಇ-ಇನ್ವಾಯ್ಸ್ ಗಳು ತಾಳೆ ಆಗುತ್ತಿಲ್ಲ ಎಂದು ಹೇಳಲಾಗಿದೆ.

5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯಾಪಾರಗಳು ಮಾರ್ಚ್ 1 ರಿಂದ ಎಲ್ಲಾ B2B ವಹಿವಾಟುಗಳಿಗೆ ಇ-ಇನ್‌ವಾಯ್ಸ್ ವಿವರಗಳನ್ನು ಸೇರಿಸದೆ ಇ-ವೇ ಬಿಲ್ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಸರಕು ಮತ್ತು ಸೇವಾ ತೆರಿಗೆಯ ಅಡಿಯಲ್ಲಿ, 50,000 ರೂ.ಗಿಂತ ಹೆಚ್ಚು ಮೌಲ್ಯದ ಸರಕುಗಳ ಅಂತರ-ರಾಜ್ಯ ಸಾಗಣೆಗೆ ಇ-ವೇ ಬಿಲ್‌ಗಳ ಅಗತ್ಯವಿದೆ.

ಈ ಕೆಲವು ಸಂದರ್ಭಗಳಲ್ಲಿ, ಇ-ವೇ ಬಿಲ್ ಮತ್ತು ಇ-ಇನ್‌ವಾಯ್ಸ್ ಅಡಿಯಲ್ಲಿ ಪ್ರತ್ಯೇಕವಾಗಿ ನಮೂದಿಸಲಾದ ಇನ್‌ವಾಯ್ಸ್ ವಿವರಗಳು ನಿರ್ದಿಷ್ಟ ನಿಯತಾಂಕಗಳಿಗೆ ಹೊಂದಿಕೆಯಾಗುವುದಿಲ್ಲ. ಇದು ಇ-ವೇ ಬಿಲ್ ಮತ್ತು ಇ-ಇನ್‌ವಾಯ್ಸ್ ಸ್ಟೇಟ್‌ಮೆಂಟ್‌ಗಳಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಮಾರ್ಚ್ 1 ರಿಂದ ಇ-ಇನ್ ವಾಯ್ಸ್ ಇಲ್ಲದೇ ಸೃಷ್ಟಿಸುವ ಇ-ವೇ ಬಿಲ್ ಗಳನ್ನು ಸ್ವೀಕರಿಸುವುದಿಲ್ಲ. ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಅಡಿಯಲ್ಲಿ ಸೂಚಿಸಿದ ಮಾನದಂಡ ಪಾಲಿಸಬೇಕಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...