alex Certify ಸಾರ್ವಜನಿಕರೇ ಗಮನಿಸಿ: ‘ಎಂಆಧಾರ್’ ನಲ್ಲಿ UIDAI ನಿಂದ ಮಹತ್ವದ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಗಮನಿಸಿ: ‘ಎಂಆಧಾರ್’ ನಲ್ಲಿ UIDAI ನಿಂದ ಮಹತ್ವದ ಬದಲಾವಣೆ

ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ 2017 ರಲ್ಲಿ ಎಂ ಆಧಾರ್ ಆಪ್ ಪ್ರಾರಂಭಿಸಿತು. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ಆಧಾರ್ ಕಾರ್ಡನ್ನು ಕಾಗದದ ರೂಪದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ.

ಈ ಅಪ್ಲಿಕೇಶನನ್ನು ಯುಐಡಿಎಐ ರಚಿಸಿದೆ. ಈ ಅಪ್ಲಿಕೇಶನ್ ಬಗ್ಗೆ ಯುಐಡಿಎಐ ಈಗ ಮತ್ತೊಂದು ನವೀಕರಣ ಮಾಡಿದೆ. ಇನ್ಮುಂದೆ 5 ಜನರ ಆಧಾರ್ ಕಾರ್ಡ್ ಪ್ರೊಫೈಲ್‌ಗಳನ್ನು ಎಂಆಧಾರ್ ನಲ್ಲಿ ಸೇರಿಸಬಹುದು.

ಅಪ್ಲಿಕೇಶನ್  ಬಗ್ಗೆ ಯುಐಡಿಎಐ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಈ ಮೊದಲು ಗರಿಷ್ಠ ಮೂರು ಪ್ರೊಫೈಲ್‌ಗಳನ್ನು ಎಂಆಧಾರ್ ಗೆ ಸೇರಿಸಬಹುದಿತ್ತು. ಬಳಕೆದಾರರ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ವಿಳಾಸದ ಜೊತೆಗೆ ಫೋಟೋ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ಎಂಆಧಾರ್  ಡೌನ್ಲೋಡ್ ಮಾಡಬೇಕು. ಈ ಅಪ್ಲಿಕೇಶನ್ ಬಳಸಲು, ಬಳಕೆದಾರರು ಹೆಸರು ನೋಂದಾಯಿಸಿಕೊಳ್ಳಬೇಕು.

ಹೀಗೆ ಮಾಡಿದ್ರೆ ನಿಮಗೆ ಸಿಗಲಿದೆ ಅಮೆಜಾನ್​, ನೆಟ್​ಫ್ಲಿಕ್ಸ್​ ಉಚಿತ ಚಂದಾದಾರಿಕೆ

ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸಲು, ಬಯೋಮೆಟ್ರಿಕ್ ಲಾಕಿಂಗ್ ಮತ್ತು ಅನ್ಲಾಕಿಂಗ್ ವ್ಯವಸ್ಥೆಯನ್ನು ಅಪ್ಲಿಕೇಶನ್‌ನಲ್ಲಿ ನೀಡಲಾಗಿದೆ. ಅಪ್ಲಿಕೇಶನ್‌ನಲ್ಲಿ ಒಟಿಪಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ತಮ್ಮ ಪ್ರೊಫೈಲ್ ನವೀಕರಿಸಲು ಸಹ ಸಾಧ್ಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...