alex Certify ಹೀಗೆ ಮಾಡಿದ್ರೆ ನಿಮಗೆ ಸಿಗಲಿದೆ ಅಮೆಜಾನ್​, ನೆಟ್​ಫ್ಲಿಕ್ಸ್​ ಉಚಿತ ಚಂದಾದಾರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿದ್ರೆ ನಿಮಗೆ ಸಿಗಲಿದೆ ಅಮೆಜಾನ್​, ನೆಟ್​ಫ್ಲಿಕ್ಸ್​ ಉಚಿತ ಚಂದಾದಾರಿಕೆ

ಅಮೆಜಾನ್​​ ಪ್ರೈಮ್​, ನೆಟ್​ಫ್ಲಿಕ್ಸ್ ಸೇರಿದಂತೆ ವಿವಿಧ ಒಟಿಟಿ ಫ್ಲಾಟ್​ಫಾರಂಗಳಲ್ಲಿ ಸಿನಿಮಾ ಹಾಗೂ ವೆಬ್​ ಸಿರೀಸ್​ಗಳನ್ನ ನೋಡಬೇಕು ಅಂದರೆ ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಈ ಒಟಿಟಿ ವೇದಿಕೆಗಳ ಚಂದಾದಾರಿಕೆಯನ್ನ ಉಚಿತವಾಗಿಯೂ ಪಡೆಯಬಹುದು. ಇದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ. ನಿಮ್ಮ ಮೊಬೈಲ್​ ರೀಚಾರ್ಜ್​ ಪ್ಲಾನ್​​ನ್ನು ಯೋಚನೆ ಮಾಡಿ ಆಯ್ಕೆ ಮಾಡಿಕೊಂಡರೆ ಉಚಿತ ಚಂದಾದಾರಿಕೆ ನಿಮ್ಮದಾಗಲಿದೆ.

ರಿಲಯನ್ಸ್ ಜಿಯೋ : ರಿಲಾಯನ್ಸ್ ಜಿಯೋದಲ್ಲಿರುವ 399 ರೂಪಾಯಿಯ ಪೋಸ್ಟ್​ಪೇಯ್ಡ್ ಪ್ಲಾನ್​ ಮೂಲಕ ನೀವು ಓಟಿಟಿ ವೇದಿಕೆಯಲ್ಲಿ ಉಚಿತ ಚಂದಾದಾರಿಕೆ ಪಡೆಬಹುದಆಗಿದೆ. ಇದರಲ್ಲಿ 75 ಜಿಬಿ ಡೇಟಾ ಸಿಗಲಿದ್ದು ಈ ಡೇಟಾ ಖಾಲಿಯಾದ ಬಳಿಕ ಪ್ರತಿ ಜಿಬಿಗೆ 10 ರೂಪಾಯಿ ವೆಚ್ಚವಾಗಲಿದೆ. ಅನಿಯಮಿತ ಕರೆ, 100 ಉಚಿತ ಎಸ್​ಎಂಎಸ್​ ಕೂಡ ಸಿಗಲಿದೆ. ಇದರ ಜೊತೆಯಲ್ಲಿ ನಿಮಗೆ ಜಿಯೋ ಟಿವಿ, ಜಿಯೋ ಸಿನಿಮಾಗಳಲ್ಲಿ ಉಚಿತ ಚಂದಾದಾರಿಕೆ ಸಿಗಲಿದೆ.

ಗ್ರಾಹಕರು ನೆಟ್​ಫ್ಲಿಕ್ಸ್, ಅಮೆಜಾನ್​ ಪ್ರೈಮ್​ ವಿಡಿಯೋ ಹಾಗೂ ಡಿಸ್ನೇ ಪ್ಲಸ್​ ಹಾಟ್​ಸ್ಟಾರ್​ ಚಂದಾದಾರಿಕೆಯನ್ನೂ ಉಚಿತವಾಗಿ ಪಡೆಯಬಹುದಾಗಿದೆ. ಇದಕ್ಕಾಗಿ ಗ್ರಾಹಕರು ಮೊದಲು ಮೈ ಜಿಯೋ ಅಪ್ಲಿಕೇಶನ್​ನ್ನು ಡೌನ್​ಲೋಡ್​ ಮಾಡಬೇಕು. ಇದರಲ್ಲಿ ಲಾಗಿನ್​ ಆದ ಬಳಿಕ ನೆಟ್​ಫ್ಲಿಕ್ಸ್​ ಆಕ್ಟಿವೇಷನ್​ ಬ್ಯಾನರ್​​ನಲ್ಲಿ ನಿಮಗೆ ಈ ಅಪ್ಲಿಕೇಶನ್​ನ ಹೋಂಪೇಜ್​ ಕಾಣಿಸಲಿದೆ. 199 ರೂಪಾಯಿ ಮೌಲ್ಯದ ಮೊಬೈಲ್​ ಓನ್ಲಿ ನೆಟ್​ಫ್ಲಿಕ್ಸ್​ ಪ್ಲಾನ್​ ಸಿಗಲಿದೆ. ಇದೇ ವಿಧಾನವನ್ನ ಅಮೆಜಾನ್ ಪ್ರೈಮ್​ಗೂ ಬಳಸಬಹುದಾಗಿದೆ.

ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ

ಏರ್​ಟೆಲ್​ 499 ರೂಪಾಯಿ ಮೌಲ್ಯದ ಪೋಸ್ಟ್​ಪೇಯ್ಡ್​ ಪ್ಲಾನ್​​ ಕೂಡ ಜಿಯೋ 399 ರೂಪಾಯಿ ಪೋಸ್ಟ್​ ಪೇಯ್ಡ್ ಪ್ಲಾನ್​ನಂತೆಯೇ ಇದೆ. ಇದರಲ್ಲಿ ನಿಮಗೆ ಒಂದು ವರ್ಷಗಳ ಕಾಲ ಅಮೆಜಾನ್​ ಪ್ರೈಂ ವಿಡಿಯೋ ಹಾಗೂ ಡಿಸ್ನೆ ಪ್ಲಸ್​ ಹಾಟ್​ಸ್ಟಾರ್​​ನ ವಿಐಪಿ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಆದರೆ ಏರ್​ಟೆಲ್​ನ ಯಾವುದೇ ಪ್ಲಾನ್​​ನಲ್ಲಿ ನೆಟ್​ಫ್ಲಿಕ್ಸ್ ಸೌಕರ್ಯ ಇರೋದಿಲ್ಲ.

ನೀವು ವೋಡಾಫೋನ್​ನಲ್ಲಿ ಒಟಿಟಿ ಉಚಿತ ಚಂದಾದಾರಿಕೆಯನ್ನ ಅರಸುತ್ತಿದ್ದರೆ 499 ರೂಪಾಯಿಯ ಪ್ಯಾಕ್​ನ್ನು ನೀವು ಆಯ್ಕೆ ಮಾಡಬಹುದಾಗಿದೆ. ಈ ಪ್ಯಾಕ್​ನಲ್ಲಿ ನಿಮಗೆ ಅಮೆಜಾನ್​ ಪ್ರೈಮ್​ ವಿಡಿಯೋ, ಜಿ 5 ಉಚಿತ ಚಂದಾದಾರಿಕೆ ಸಿಗಲಿದೆ. ಆದರೆ ವೋಡಾಫೋನ್​ – ಐಡಿಯಾದ ಯಾವುದೇ ಪ್ಲಾನ್​ನಲ್ಲಿ ನಿಮಗೆ ಹಾಟ್​ಸ್ಟಾರ್​ ಹಾಗೂ ನೆಟ್​ಫ್ಲಿಕ್ಸ್​​ಗೆ ಉಚಿತ ಚಂದಾದಾರಿಕೆ ಸಿಗೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...