alex Certify ಶುರುವಾದ ಉಬರ್ ಸೇವೆಯಲ್ಲಿ ಪಾಲಿಸಬೇಕು ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುರುವಾದ ಉಬರ್ ಸೇವೆಯಲ್ಲಿ ಪಾಲಿಸಬೇಕು ಈ ನಿಯಮ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ 4 ಜಾರಿಯಲ್ಲಿದೆ. ಹೊಸ ಮಾರ್ಗಸೂಚಿ ಪ್ರಕಾರ ಕೆಲವು ಕಡೆ ಅಪ್ಲಿಕೇಷನ್ ಆಧಾರಿತ ಕ್ಯಾಬ್ ಸೇವೆ ಶುರುವಾಗಿದೆ. ಉಬರ್ ಸೇವೆ ಶುರು ಮಾಡುವ ವೇಳೆ ಕೆಲವೊಂದು ನಿಯಮಗಳನ್ನು ಕಡ್ಡಾಯ ಮಾಡಲಾಗಿದೆ. ಉಬರ್ ಚಾಲಕರು ಹಾಗೂ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯವಾಗಿದೆ.

ಅಪ್ಲಿಕೇಷನ್ ಗೆ ಲಾಗ್ ಇನ್ ಆಗುವ ವೇಳೆ ಚಾಲಕ ಮಾಸ್ಕ್ ಹಾಕಿಕೊಂಡಿರಬೇಕು. ಇದ್ರ ಜೊತೆ ಆರೋಗ್ಯವಾಗಿದ್ದೇನೆಂದು ದೃಢೀಕರಣ ನೀಡಬೇಕು. ಪ್ರತಿ ಪ್ರಯಾಣದ ನಂತ್ರ ವಾಹನವನ್ನು ಸ್ಯಾನಿಟೈಜರ್ ಮಾಡಬೇಕು. ಆಗಾಗ ಕೈ ತೊಳೆಯುತ್ತಿರಬೇಕು. ಈ ನಿಯಮ ಪಾಲನೆ ಮಾಡದೆ ಹೋದಲ್ಲಿ ಚಾಲಕನನ್ನು ಕೆಲಸದಿಂದ ತೆಗೆಯಲಾಗುತ್ತದೆ.

ಪ್ರಯಾಣಿಕರು ಅಪ್ಲಿಕೇಷನ್ ಓಪನ್ ಮಾಡ್ತಿದ್ದಂತೆ ಅದ್ರಲ್ಲಿ ಮಾರ್ಗಸೂಚಿಗಳು ಕಾಣಿಸುತ್ತವೆ. ಅದನ್ನು ಪ್ರಯಾಣಿಕರು ಪಾಲಿಸಬೇಕು. ಚಾಲಕನನ್ನು ಹೊರತುಪಡಿಸಿ ಕಾರಿನಲ್ಲಿ ಇಬ್ಬರ ಪ್ರಯಾಣಕ್ಕೆ ಮಾತ್ರ ಅನುಮತಿಯಿದೆ. ಎಸಿ ಬಳಸಬಾರದು. ನಿಮ್ಮ ವಸ್ತುಗಳನ್ನು ನೀವೇ ನಿಭಾಯಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...