alex Certify 0 ಸೇರಿಸಿ ಡಯಲ್ ಮಾಡಿ, ಮೊಬೈಲ್ ಗೆ 11 ಡಿಜಿಟ್ ಹೊಸ ವ್ಯವಸ್ಥೆ ಟ್ರಾಯ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

0 ಸೇರಿಸಿ ಡಯಲ್ ಮಾಡಿ, ಮೊಬೈಲ್ ಗೆ 11 ಡಿಜಿಟ್ ಹೊಸ ವ್ಯವಸ್ಥೆ ಟ್ರಾಯ್ ಮಾಹಿತಿ

ನವದೆಹಲಿ: ಇನ್ನು ಮುಂದೆ 11 ಡಿಜಿಟ್ ಮೊಬೈಲ್ ನಂಬರ್ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಲಾಗಿತ್ತು. ಆದರೆ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮೊಬೈಲ್ ನಂಬರ್ ನೀಡಿಕೆಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಹೊಸ ಮೊಬೈಲ್ ನಂಬರ್ ನೀಡುವ ಸಂದರ್ಭ 10 ಅಂಕಿಯ ಬದಲಾಗಿ 11 ಡಿಜಿಟ್ ನೀಡಲು ಮುಂದಾಗಿದೆ ಎಂದು ಹೇಳಲಾಗಿತ್ತು. ಇದರಿಂದ ಗೊಂದಲ ನಿರ್ಮಾಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೊಸ ಮೊಬೈಲ್ ನಂಬರ್ ವ್ಯವಸ್ಥೆಯನ್ನು ಜಾರಿ ಮಾಡದಿರಲು ನಿರ್ಧರಿಸಲಾಗಿದೆ.

11 ಡಿಜಿಟ್ ಮೊಬೈಲ್ ನಂಬರ್ ವ್ಯವಸ್ಥೆಯನ್ನು ಜಾರಿ ಮಾಡುವುದಿಲ್ಲ. ಹಳೆಯ ಮೊಬೈಲ್ ನಂಬರ್ ವ್ಯವಸ್ಥೆ ಮುಂದುವರೆಯಲಿದೆ. ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಕರೆ ಮಾಡಲು 10 ಅಂಕೆಯ ಮೊಬೈಲ್ ನಂಬರ್ ಗೆ ಡಯಲ್ ಮಾಡುವ ಮೊದಲು ಸೊನ್ನೆಯನ್ನು ಡಯಲ್ ಮಾಡಬೇಕಿದೆ. ಲ್ಯಾಂಡ್ ಲೈನ್ ನಿಂದ ಲ್ಯಾಂಡ್ ಲೈನ್ ಗೆ ಸ್ಥಳೀಯ ಕರೆ ಹೊರತಾಗಿ ಉಳಿದ ಕಡೆ ಕರೆಮಾಡಲು ಎಸ್ಟಿಡಿ ಕೋಡ್ ಗೆ 0 ಸೇರಿಸುವುದು ಕಡ್ಡಾಯವಾಗಿರುತ್ತದೆ. ಮೊಬೈಲ್ನಿಂದ ಲ್ಯಾಂಡ್ ಲೈನ್ ಗೆ ಕರೆ ಮಾಡುವಾಗಲೂ ಸೊನ್ನೆಯನ್ನು ಡಯಲ್ ಮಾಡಬೇಕಿದೆ. 11 ಅಂಕಿಯ ಮೊಬೈಲ್ ನಂಬರ್ ಜಾರಿ ಕುರಿತಾಗಿ ಗ್ರಾಹಕರು ಗೊಂದಲಕ್ಕೆ ಒಳಗಾಗಬೇಕಿಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...