alex Certify ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಟೊಮೆಟೊ ದರ ಕೆಜಿಗೆ 300 ರೂ. ಗೆ ಏರಿಕೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಟೊಮೆಟೊ ದರ ಕೆಜಿಗೆ 300 ರೂ. ಗೆ ಏರಿಕೆ ಸಾಧ್ಯತೆ

ನವದೆಹಲಿ: ಕಳೆದ ತಿಂಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಟೊಮೆಟೊ ದರ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.

ಸದ್ಯದಲ್ಲೇ ಟೊಮೆಟೊ ದರ 300 ರೂ. ತಲುಪುವ ಸಾಧ್ಯತೆ ಇದೆ ಎಂದು ಸಗಟು ಮಾರುಕಟ್ಟೆಯ ವ್ಯಾಪಾರಿಗಳು ಹೇಳಿದ್ದಾರೆ. ದೇಶದ ವಿವಿಧೆಡೆ ಮಳೆ ಮತ್ತಿತರ ಕಾರಣಗಳಿಂದ ಟೊಮೆಟೊ ಬೆಳೆ ಕುಂಠಿತವಾಗಿ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅನೇಕ ಭಾಗದಲ್ಲಿ ಟೊಮೆಟೊ ದರ ಗಗನಕ್ಕೇರಿದೆ.

ದೆಹಲಿಯ ಸಗಟು ಮಾರುಕಟ್ಟೆಯಲ್ಲಿ ಗುರುವಾರ ಟೊಮೆಟೊ ಕೆಜಿಗೆ 220 ರೂ.ಗೆ ಮಾರಾಟವಾಗಿದೆ. ಬುಧವಾರ ಚಿಲ್ಲರೆ ದರ ಕೆಜಿಗೆ 259 ರೂ. ಇತ್ತು. ಪೂರೈಕೆಯಲ್ಲಿ ವ್ಯತ್ಯಯದ ಕಾರಣ ಸದ್ಯದಲ್ಲೇ ಟೊಮೆಟೊ ದರ ಕೆಜಿಗೆ 300 ರೂ. ಮುಟ್ಟಲಿದೆ ಎಂದು ಮಾರುಕಟ್ಟೆ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...