alex Certify ಅರ್ಧ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದ ರೈತ ಗಳಿಸಿದ್ದೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಧ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದ ರೈತ ಗಳಿಸಿದ್ದೆಷ್ಟು ಗೊತ್ತಾ…?

ಬೆಳಗಾವಿ: ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದಂತೆ ಬೆಳೆಗಾರರಿಗೆ ಬಂಪರ್ ಲಾಭ ಸಿಗತೊಡಗಿದೆ. ಬೆಳಗಾವಿಯ ರೈತರೊಬ್ಬರು ಅರ್ಧ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದು, ಅವರ ಅದೃಷ್ಟ ಖುಲಾಯಿಸಿದೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ರೈತ ಮಹೇಶ್ ಹಿರೇಮಠ ಅರ್ಧ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು 11 ಲಕ್ಷ ರೂ. ಗಳಿಸಿದ್ದಾರೆ. 3700 ಟೊಮೆಟೊ ಸಸಿಗಳನ್ನು ತಂದು ನಾಟಿ ಮಾಡಿದ್ದರು. 45 ದಿನಗಳ ಬಳಿಕ ಕೊಯ್ಲು ಆರಂಭಿಸಿದ್ದು, ಅರ್ಧ ಎಕರೆಯಲ್ಲಿ 45 ದಿನಗಳಲ್ಲಿ 20 ಟನ್ 400 ಕೆಜಿ ಟೊಮೆಟೊ ಬಂದಿದೆ. 20 ಕೆಜಿ ತೂಕದ 100 ರಿಂದ 120 ಕ್ಯಾರಿ ಬ್ಯಾಗ್ ಗಳಲ್ಲಿ ಟೊಮೆಟೊ ಮಾರಿ 11 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಬೆಳೆ ಬೆಳೆಯಲು 2 ಲಕ್ಷ ರೂ. ಖರ್ಚಾಗಿದ್ದು, 9 ಲಕ್ಷ ರೂ. ಲಾಭ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...