alex Certify BIG NEWS: ಹೂಡಿಕೆದಾರರಿಗೆ ಸರ್ಕಾರದ ಗೋಲ್ಡ್ ಬಾಂಡ್ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೂಡಿಕೆದಾರರಿಗೆ ಸರ್ಕಾರದ ಗೋಲ್ಡ್ ಬಾಂಡ್ ಆಫರ್

This Dhanteras buy gold at great prices; the 5-day window to invest starts today –Know details here | Bullion News | Zee News

ನವದೆಹಲಿ: ದೀಪಾವಳಿ ಮುಂಚಿನ ಧನ ತ್ರಯೋದಶಿಗೆ ಕನಕ ಖರೀದಿ ರೂಢಿ ಇದ್ದವರಿಗೆ ಸರ್ಕಾರ ಅದ್ಬುತ ಆಫರ್ ನೀಡಿದೆ.‌ ಆಭರಣ, ಗೋಲ್ಡ್ ಕಾಯ್ನ್ ಮುಂತಾದ ಸಾಂಪ್ರದಾಯಿಕ ವಿಧಾನ ಅನುಸರಿಸುವ ಬದಲು ಸರ್ಕಾರದ ಸಾರ್ವಭೌಮ ಗೋಲ್ಡ್ ಬಾಂಡ್ ನ್ನು ಉತ್ತಮ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಭೌಮ ಗೋಲ್ಡ್ ಬಾಂಡ್ ಸ್ಕೀಂ – 8 ನ್ನು ಘೋಷಿಸಿದ್ದು, ನವೆಂಬರ್ 9 ರಿಂದಲೇ ಖರೀದಿಗೆ ಅವಕಾಶ ನೀಡಲಾಗಿದ್ದು, 13 ರವರೆಗೂ ಇರಲಿದೆ. 999 ರಷ್ಟು ಪರಿಶುದ್ಧವಾಗಿರುವ ಪ್ರತಿ ಗ್ರಾಂ ಚಿನ್ನಕ್ಕೆ 5127 ರೂ.ಬೆಲೆ ನಿಗದಿ ಮಾಡಲಾಗಿದೆ. ಆನ್ ಲೈನ್ ಖರೀದಿ ಮಾಡುವವರಿಗೆ ಸರ್ಕಾರ ಪ್ರತಿ‌ ಗ್ರಾಂ ಮೇಲೆ 50 ರೂ. ರಿಯಾಯಿತಿ‌ ನೀಡಲಿದೆ.

8 ವರ್ಷದ‌ ಬಾಂಡ್ ಇದಾಗಿದ್ದು, 5 ವರ್ಷಗಳ ನಂತರ ಬಳಕೆಗೆ ಅವಕಾಶವಿದೆ. ಕನಿಷ್ಟ 1 ಗ್ರಾಂ ಖರೀದಿಸಬೇಕಿದ್ದು, ಏಕಾಂಗಿ ವ್ಯಕ್ತಿ ಹಾಗೂ ದಂಪತಿ ಗರಿಷ್ಠ ‌4 ಕೆಜಿ, ಟ್ರಸ್ಟ್ ಗಳು 20 ಕೆಜಿವರೆಗೂ ಖರೀದಿಸಬಹುದಾಗಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...