alex Certify ಮಾರುಕಟ್ಟೆಗೆ ಲಗ್ಗೆ ಇಟ್ಟ ತುಪ್ಪದ ದೀಪ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಗೆ ಲಗ್ಗೆ ಇಟ್ಟ ತುಪ್ಪದ ದೀಪ…..!

ದೇಶದಲ್ಲಿ ಪ್ರಾಚೀನ ಪದ್ಧತಿಯನ್ನ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಬ್ರಿಟಿಷ್​ ಮೂಲದ ಪ್ರಜೆ ತುಪ್ಪದ ದೀಪವನ್ನ ಮತ್ತೊಮ್ಮೆ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಲಂಡನ್​​ನಿಂದ ಮರಳಿದ ಸಮೀರ್​ ಮಹಾಜನ್​ ಎಂಬ ಉದ್ಯಮಿ ಪ್ರಸ್ತುತ ಮಹಾರಾಷ್ಟ್ರದ ಥಾನೆಯಲ್ಲಿ ನೆಲೆಸಿದ್ದಾರೆ. ರಾವಣನ ವಧೆ ಮಾಡಿ ಸೀತೆಯನ್ನ ಕರೆದುಕೊಂಡು ರಾಮ ಅಯೋಧ್ಯೆಗೆ ಬಂದಾಗ ತುಪ್ಪದ ದೀಪ ಹಚ್ಚಿ ಸ್ವಾಗತ ಕೋರಲಾಗಿತ್ತಂತೆ.

ಇದೇ ಪರಿಕಲ್ಪನೆಯನ್ನ ಇಟ್ಟುಕೊಂಡಿರೋ ಸಮೀರ್​ ತುಪ್ಪದ ದೀಪವನ್ನ ತಯಾರಿಸಿದ್ದಾರೆ.

ತಮ್ಮ ಈ ಉದ್ಯಮಕ್ಕೆ ಸುಲತಾ ಎಂದು ಹೆಸರಿಟ್ಟಿರುವ 41 ವರ್ಷದ ಸಮೀರ್, ತಮ್ಮ ಹಳೆಯ ಪದ್ಧತಿಗಳಿಗೆ ಮತ್ತೆ ಜೀವ ಕೊಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಇಂತಹದ್ದೊಂದು ಪ್ರಯತ್ನ ಮಾಡಿದ್ದೇನೆ. ಅಲ್ಲದೇ ಮೇಕ್​ ಇನ್​ ಇಂಡಿಯಾಗೂ ಈ ತುಪ್ಪದ ದೀಪಗಳು ಉತ್ತೇಜನ ನೀಡುತ್ತೆ ಅಂತಾ ಹೇಳಿದ್ದಾರೆ. ಗುಲಾಬಿ ಸುಗಂಧದ ವನಸ್ಪತಿ ತುಪ್ಪ ಹಾಗೂ ಮಲ್ಲಿಗೆ ಸುಗಂಧದ ಹಸುವಿನ ತುಪ್ಪದ ಹಣತೆಗಳು ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...