alex Certify ಚಿನ್ನಾಭರಣ ಖರೀದಿದಾರರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ ಚಿನ್ನ 647 ರೂ., ಬೆಳ್ಳಿಗೆ 1611 ರೂ. ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿದಾರರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ ಚಿನ್ನ 647 ರೂ., ಬೆಳ್ಳಿಗೆ 1611 ರೂ. ಹೆಚ್ಚಳ

ನವದೆಹಲಿ: ಚಿನ್ನ ಖರೀದಿಸಬೇಕೆಂದು ಕೊಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 50 ಸಾವಿರ ಸನಿಹಕ್ಕೆ ಬಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನದ ದರ 647 ರೂಪಾಯಿ ಹೆಚ್ಚಳವಾಗಿದ್ದು 49,908 ರೂಪಾಯಿಗೆ ಮಾರಾಟವಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 342 ರೂಪಾಯಿ ಜಾಸ್ತಿಯಾಗಿ 48,985 ರೂಪಾಯಿಗೆ ಮಾರಾಟವಾಗಿದ್ದು, ಮುಂಬೈನಲ್ಲಿ 325 ರೂಪಾಯಿ ಹೆಚ್ಚಳವಾಗಿ 48,690 ರೂಪಾಯಿಗೆ ಮಾರಾಟವಾಗಿದೆ. ದೆಹಲಿಯಲ್ಲಿ ಬೆಳ್ಳಿ ದರ ಕೆಜಿಗೆ 1611 ರೂಪಾಯಿ ಹೆಚ್ಚಳವಾಗಿದ್ದು 51,870 ರೂಪಾಯಿಗೆ ತಲುಪಿದೆ.

ಚಿನ್ನದ ಮೇಲೆ ಹೂಡಿಕೆ ಜಾಸ್ತಿಯಾಗಿರುವುದು ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ದರ ಏರಿಕೆಯಾಗತೊಡಗಿದೆ. ಚಿನ್ನ ಮತ್ತು ಬೆಳ್ಳಿ ದರ ಇನ್ನೂ ಹೆಚ್ಚಳವಾಗಬಹುದೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...