alex Certify ‘ವಾಟ್ಸಾಪ್’ ಗೆ ಠಕ್ಕರ್​ ಕೊಡ್ತಿದೆ ‘ಸಿಗ್ನಲ್’….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಾಟ್ಸಾಪ್’ ಗೆ ಠಕ್ಕರ್​ ಕೊಡ್ತಿದೆ ‘ಸಿಗ್ನಲ್’….!

2014ರಲ್ಲಿ ಫೇಸ್​ಬುಕ್​​ ಒಡೆತನ ಸಾಧಿಸಿದ ವಾಟ್ಸಾಪ್​ ಸದ್ಯ ಬಹಳ ಚಾಲ್ತಿಯಲ್ಲಿರುವ ಮೆಸೆಂಜಿಂಗ್​ ಅಪ್ಲಿಕೇಶನ್​ ಆಗಿದೆ. ವಿಶ್ವದಲ್ಲಿ 2 ಬಿಲಿಯನ್​ ಸಕ್ರಿಯ ಚಂದಾದಾರರನ್ನ ವಾಟ್ಸಾಪ್​ ಹೊಂದಿದೆ. 2016ರಿಂದ ವಾಟ್ಸಾಪ್​ ಡಿಫಾಲ್ಟ್​ ಮೆಸೇಜ್​ ಸೌಲಭ್ಯವನ್ನ ನೀಡಿದೆ.

ಈ ರೀತಿ ಮೆಸೇಜಿಂಗ್ ಅಪ್ಲಿಕೇಶನ್​ ಲೋಕದಲ್ಲಿ ತನ್ನದೇ ನಾಗಾಲೋಟ ಮುಂದುವರಿಸಿರುವ ವಾಟ್ಸಾಪ್​ಗೆ ಇದೀಗ ಸಿಗ್ನಲ್​ ತೊಂದರೆ ಕೊಡುತ್ತಿದೆ. ಹಾಗಂತ ವಾಟ್ಸಾಪ್​ಗೆ ಏನಾದ್ರೂ ನೆಟ್​ವರ್ಕ್​ ಸಮಸ್ಯೆಯಾಯ್ತಾ ಅಂತಾ ಭಾವಿಸಬೇಡಿ. ಅಸಲಿಗೆ ಸಿಗ್ನಲ್​ ಅನ್ನೋದು ಕೂಡ ಮೆಸೇಜಿಂಗ್ ಆಪ್​ ಆಗಿದ್ದು ಇದು ವಾಟ್ಸಾಪ್​ನ್ನ ಹಿಂದಿಕ್ಕುವ ಪ್ರಯತ್ನದಲ್ಲಿದೆ.

ವಾಟ್ಸಾಪ್​ ಉನ್ನತ ಮಟ್ಟದ ಸೇವೆಯನ್ನ ನೀಡಲಿಕ್ಕೋಸ್ಕರ ಮ್ಯಾಕ್ಸಿ ಮರ್ಲಿನ್​ ಸ್ಪೈಕ್​ ಅವರ ಓಪನ್​ ವಿಸ್ಪರ್​ ಸಿಸ್ಟಮ್​​ ಎನ್ಸಕ್ಪಿಪ್ಟೆಡ್​ ಮೆಸೇಜಿಂಗ್ ಪ್ರೊಟೋಕಾಲ್​ನೊಂದಿಗೆ ಸಂಯೋಜನೆ ಹೊಂದಿತು. ಈ ಪ್ರೊಟೋಕಾಲ್​ ಅತ್ಯಂತ ಸುರಕ್ಷಿತ ಎಂಬ ಕಾರಣಕ್ಕೆ ಮೈಕ್ರೋಸಾಫ್ಟ್ ಹಾಗೂ ಗೂಗಲ್​ ಕೂಡ ಬಳಸಿಕೊಂಡಿದೆ.

ಈಗ ಇದೇ ಓಪನ್​ ವಿಸ್ಪರ್​ ಸಿಸ್ಟಮ್​ ಸಿಗ್ನಲ್​ ಮೆಸೆಂಜರ್​ ಎಂಎಲ್​ಸಿಯಾಗಿ ಮಾರ್ಪಾಡಾಗಿದ್ದು ಸಿಗ್ನಲ್​ ಫೌಂಡೇಶನ್​ನ ಒಂದು ಭಾಗವಾಗಿದೆ. ಇಷ್ಟು ದಿನ ವಾಟ್ಸಾಪ್​​ ಸುರಕ್ಷತೆಯ ಪ್ರೊಟೋಕಾಲ್​ ಆಗಿದ್ದ ಸಿಗ್ನಲ್​ ಈಗ ವಾಟ್ಸಾಪ್​ನ್ನೇ ಹಿಂದಿಕ್ಕಲು ಮುಂದಾಗಿದೆಯಂತೆ.

ಅಂದಹಾಗೆ ಸಿಗ್ನಲ್ ಏಕಾಏಕಿ ಪ್ರಚಲಿತಕ್ಕೆ ಬರಲು ಕಾರಣ ವಿಶ್ವದ ನಂ.1 ಶ್ರೀಮಂತ ಎಲಾನ್​ ಮಸ್ಕ್​ ಮಾಡಿದ್ದ ಟ್ವೀಟ್​. ಎಲಾನ್ ಮಸ್ಕ್​ ಟ್ವಿಟರ್​ನಲ್ಲಿ ಸಿಗ್ನಲ್​ ಬಳಕೆ ಮಾಡಿ ಅಂತಾ ಹೇಳಿದ್ದರು. ಹೀಗಾಗಿ ಜನರು ಸಿಗ್ನಲ್​ ಅಪ್ಲಿಕೇಶನ್​ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...