alex Certify ರಾಜ್ಯಕ್ಕೆ ವಿದ್ಯುತ್ ಶಾಕ್: 1 ಸಾವಿರ ಕೋಟಿ ರೂ. ಬಾಕಿ ನೀಡದ ಕಾರಣಕ್ಕೆ 1000 ಮೆಗಾವ್ಯಾಟ್ ವಿದ್ಯುತ್ ಗೆ ಬ್ರೇಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಕ್ಕೆ ವಿದ್ಯುತ್ ಶಾಕ್: 1 ಸಾವಿರ ಕೋಟಿ ರೂ. ಬಾಕಿ ನೀಡದ ಕಾರಣಕ್ಕೆ 1000 ಮೆಗಾವ್ಯಾಟ್ ವಿದ್ಯುತ್ ಗೆ ಬ್ರೇಕ್

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ತೀವ್ರವಾಗಬಹುದು. ಬಾಕಿ ಪಾವತಿ ಮಾಡದಿರುವ ಕಾರಣ 1,000 ಮೆಗಾವ್ಯಾಟ್ ವಿದ್ಯುತ್ ಅನ್ನು ಕೇಂದ್ರ ಸರ್ಕಾರ ತಡೆಹಿಡಿಯಬಹುದು ಎಂದು ಹೇಳಲಾಗಿದೆ.

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್(NTPC)ನ ಕೇಂದ್ರ ಉತ್ಪಾದನಾ ಕೇಂದ್ರಗಳಿಗೆ(CGS) ಪಾವತಿಸಲು ರಾಜ್ಯವು ಈಗ ಹಣ ಸಂಗ್ರಹಿಸುತ್ತಿದೆ. ಕರ್ನಾಟಕವು ಐದು ವಿದ್ಯುತ್ ಪೂರೈಕೆ ಕಂಪನಿಗಳನ್ನು (ಎಸ್ಕಾಂ)ಹೊಂದಿದ್ದು, ಸಿಜಿಎಸ್ 1,000 ಕೋಟಿ ರೂ. ಇದೆ. ಹಿರಿಯ ಅಧಿಕಾರಿಗಳ ಪ್ರಕಾರ, ಬಾಕಿ ಪಾವತಿ ಮಾಡದಿರುವುದರಿಂದ ಮಳೆಗಾಲದ ನಂತರದ ಅಕ್ಟೋಬರ್ ಅಂತ್ಯದ ವೇಳೆಗೆ 1,000 ಮೆಗಾವ್ಯಾಟ್ ಕೊರತೆಯಾಗಬಹುದು ಎನ್ನಲಾಗಿದೆ.

ಕಲ್ಲಿದ್ದಲು ದಾಸ್ತಾನು ಕಡಿಮೆಯಾಗಿದೆ. ಕೇಂದ್ರವು 1,000 MW ತಡೆಹಿಡಿಯಲಿದೆ. ಇದರಿಂದಾಗಿ ಗಂಭೀರವಾದ ವಿದ್ಯುತ್ ಬಿಕ್ಕಟ್ಟನ್ನು ಎದುರಿಸಬಹುದು. ಕೇಂದ್ರಕ್ಕೆ ಪಾವತಿಸಲು ವಿಶೇಷ ಪ್ಯಾಕೇಜ್‌ನ ಅಗತ್ಯವನ್ನು ಮನವರಿಕೆ ಮಾಡಿದ್ದು, ಹಣಕಾಸು ಇಲಾಖೆ ಅದನ್ನು ಸರಿಪಡಿಸಿದೆ ಎಂದು ಹೇಳಲಾಗಿದೆ.

ಕೇಂದ್ರ ವಿದ್ಯುತ್ ಪಾಲನ್ನು ಪುನಶ್ಚೇತನಗೊಳಿಸಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು. ಪ್ರಸ್ತುತ, ರಾಜ್ಯದ ಸರಾಸರಿ ಬೇಡಿಕೆ ದಿನಕ್ಕೆ 8,000-8,500 MW ನಷ್ಟು ಇದೆ. ಕೋವಿಡ್ ಕಡಿಮೆಯಾಗುವುದು ಮತ್ತು ಆರ್ಥಿಕ ಚಟುವಟಿಕೆಯ ಪುನರುಜ್ಜೀವನದೊಂದಿಗೆ ಮುಂದಿನ ಎರಡು ತಿಂಗಳಲ್ಲಿ ಬೇಡಿಕೆ ದ್ವಿಗುಣಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...