alex Certify ರೇರಾ ಕಾಯ್ದೆ: ಅಪಾರ್ಟ್ ಮೆಂಟ್ ಖರೀದಿ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇರಾ ಕಾಯ್ದೆ: ಅಪಾರ್ಟ್ ಮೆಂಟ್ ಖರೀದಿ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇರಾ ಕಾಯ್ದೆ ಅಡಿ ಪರಿಹಾರ ವಸೂಲಾತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೇರಾ ನಿಯಮ 2017ಕ್ಕೆ ತಿದ್ದುಪಡಿತರಲಿದ್ದು, ಇದರಿಂದ ಮೋಸಕ್ಕೆ ಒಳಗಾದ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಅಪಾರ್ಟ್ ಮೆಂಟ್ ಗಳ ನಿರ್ಮಾಣ ಮತ್ತು ಖರೀದಿದಾರರ ನಡುವೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸಂಪರ್ಕ ಸೇತುವೆಯಾಗಲಿದೆ. ಕಾನೂನು ಚೌಕಟ್ಟಿನೊಳಗೆ ಅಪಾರ್ಟ್ಮೆಂಟ್ ಖರೀದಿ ವ್ಯವಹಾರವನ್ನು ತರಲಾಗುವುದು. ಸುಮಾರು 4000 ಎಸ್ಟೇಟ್ ಏಜೆಂಟರು ನೋಂದಣಿ ಆಗಿದ್ದು ರೇರಾ ಪ್ರಾಧಿಕಾರ ಅಪಾರ್ಟ್ಮೆಂಟ್ ಖರೀದಿ ನಿರ್ಮಾಣಕ್ಕೆ ಸಂಬಂಧಿತ ದೂರುಗಳನ್ನು ಪರಿಶೀಲಿಸಲಿದೆ. ರೇರಾ ಕಾಯ್ದೆಯಡಿ ಗ್ರಾಹಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...