alex Certify ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಪ್ಲಾನ್

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ವರ್ಕ್ ಫ್ರಂ ಹೋಂ ಕೆಲಸಕ್ಕಾಗಿ 999 ರೂಪಾಯಿಗಳ ತ್ರೈಮಾಸಿಕ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಬಳಕೆದಾರರು ಪ್ರತಿದಿನ 3 ಜಿಬಿ ಡೇಟಾ ಸೇರಿದಂತೆ ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಈ ಯೋಜನೆಯಲ್ಲಿ ಡೇಟಾ ಖಾಲಿಯಾಗುವ ಭಯವಿಲ್ಲದೆ ಬಳಕೆದಾರರು ತಮ್ಮ ಕಚೇರಿ ಕೆಲಸವನ್ನು ಆರಾಮವಾಗಿ ಮಾಡಬಹುದು. ರಿಲಯನ್ಸ್ ಜಿಯೋ ಇತ್ತೀಚೆಗೆ ಗ್ರಾಹಕರಿಗೆ 2,399 ರೂಪಾಯಿಗಳ ವರ್ಕ್ ಫ್ರಂ ಹೋಮ್ ಯೋಜನೆಯನ್ನು ಪರಿಚಯಿಸಿತ್ತು.

ರಿಲಯನ್ಸ್ ಜಿಯೋನ 999 ರೂಪಾಯಿಗಳ ಯೋಜನೆಯನ್ನು ಮೂರು ತಿಂಗಳ ಮಾನ್ಯತೆಯೊಂದಿಗೆ ಪರಿಚಯಿಸಲಾಗಿದೆ. ಈ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 3 ಜಿಬಿ ಡೇಟಾವನ್ನು ಪಡೆಯುತ್ತಾರೆ. ಮನೆಯಿಂದ ಕೆಲಸ ಮಾಡುವ ಗ್ರಾಹಕರಿಗೆ ಇದು ತುಂಬಾ ಉಪಯುಕ್ತವಾಗಲಿದೆ. ಜಿಯೋ ನೆಟ್ವರ್ಕ್ ಗೆ ಉಚಿತ ಕರೆ ಲಭ್ಯವಿದೆ. ಬೇರೆ ನೆಟ್ವರ್ಕ್ ಗೆ 3000 ನಿಮಿಷಗಳು ಲಭ್ಯವಿರಲಿದೆ. ದಿನಕ್ಕೆ 3 ಜಿಬಿ ಡೇಟಾವನ್ನು 64 ಕೆಬಿಪಿಎಸ್ ವೇಗದೊಂದಿಗೆ ಪಡೆಯುತ್ತಾರೆ. ಪ್ರತಿದಿನ 100 ಎಸ್‌ಎಂಎಸ್ ಸಿಗಲಿದ್ದು, ಇದ್ರ ಸಿಂಧುತ್ವ  84 ದಿನಗಳು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...