alex Certify ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಮೆರಿಕದ ತಂತ್ರಜ್ಞಾನ ಸಂಸ್ಥೆ ಕ್ವಾಲ್ಕಾಮ್ ಸಹಯೋಗದೊಂದಿಗೆ ರಿಲಯನ್ಸ್ ಭಾರತದಲ್ಲಿ 5 ಜಿ ನೆಟ್‌ವರ್ಕ್ ಯಶಸ್ವಿಯಾಗಿ ಪರೀಕ್ಷಿಸಿದೆ.

ಅಕ್ಟೋಬರ್ 20 ರಂದು ಯುಎಸ್ ಸ್ಯಾನ್ ಡಿಯಾಗೋದಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಎರಡೂ ಕಂಪನಿಗಳು ಇದನ್ನು ಘೋಷಿಸಿವೆ. ಶೀಘ್ರದಲ್ಲೇ 5 ಜಿ ನೆಟ್‌ವರ್ಕ್ ಸೌಲಭ್ಯವು ಭಾರತದ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಜಿಯೋ ಮತ್ತು ಕ್ವಾಲ್ಕಾಮ್ 5 ಜಿಎನ್‌ಆರ್ ಸೊಲ್ಯೂಷನ್ಸ್ ಮತ್ತು ಕ್ವಾಲ್ಕಾಮ್ 5 ಜಿ ರಾನ್ ಪ್ಲಾಟ್‌ಫಾರ್ಮ್‌ಗಳಲ್ಲಿ 1 ಜಿಬಿಪಿಎಸ್ ವೇಗವನ್ನು ಸಾಧಿಸಿದೆ. ಪ್ರಸ್ತುತ, ಅಮೆರಿಕ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಸ್ವಿಟ್ಜರ್ಲೆಂಡ್ ಮತ್ತು ಜರ್ಮನಿಯ ದೇಶಗಳ 5 ಜಿ ಗ್ರಾಹಕರು 1 ಜಿಬಿಪಿಎಸ್ ಇಂಟರ್ನೆಟ್ ವೇಗವನ್ನು ಪಡೆಯುತ್ತಿದ್ದಾರೆ.

ಕ್ವಾಲ್ಕಾಮ್ ಮತ್ತು ರಿಲಯನ್ಸ್ ನ ಅಂಗಸಂಸ್ಥೆ ಕಂಪನಿಯಾದ ರೆಡಿಸಿಸ್‌ನೊಂದಿಗೆ 5 ಜಿ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಬಹುದೆಂದು ರಿಲಯನ್ಸ್ ಜಿಯೋ ಅಧ್ಯಕ್ಷ ಮ್ಯಾಥ್ಯೂ ಒಮನ್, ಕ್ವಾಲ್ಕಾಮ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಭಾರತದ ಬಳಕೆದಾರರು 1 ಜಿಬಿಪಿಎಸ್ ವರೆಗಿನ ವೇಗವನ್ನು ಪಡೆಯಬಹುದಾಗಿದೆ. ದೇಶದಲ್ಲಿ 5 ಜಿ ತಂತ್ರಜ್ಞಾನವನ್ನು ಪರಿಚಯಿಸಿದ ನಂತರ, ಗ್ರಾಹಕರಿಗೆ ಹೈಸ್ಪೀಡ್ ಡೇಟಾ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...