alex Certify BIG NEWS: ಡೆಬಿಟ್, ಕ್ರೆಡಿಟ್ ಕಾರ್ಡ್ ಟೋಕನೈಸೇಶನ್ ಗಡುವು 3 ತಿಂಗಳವರೆಗೆ ವಿಸ್ತರಿಸಿದ RBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡೆಬಿಟ್, ಕ್ರೆಡಿಟ್ ಕಾರ್ಡ್ ಟೋಕನೈಸೇಶನ್ ಗಡುವು 3 ತಿಂಗಳವರೆಗೆ ವಿಸ್ತರಿಸಿದ RBI

ನವದೆಹಲಿ: ಜುಲೈ 1 ರಿಂದ ಜಾರಿಯಾಗಬೇಕಿದ್ದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಟೋಕನೈಸೇಶನ್ ನಿಯಮ 3 ತಿಂಗಳು ಮುಂದೂಡಿಕೆಯಾಗಿದೆ.

ಆನ್‌ ಲೈನ್ ಪಾವತಿಗಳಿಗೆ ಸಂಬಂಧಿಸಿದಂತೆ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಿಯಮಗಳು ಜುಲೈ 1 ರಿಂದ ಬದಲಾಗಲಿವೆ ಎಂದು ಹೇಳಲಾಗಿತ್ತು. ಕಾರ್ಡ್ ಟೋಕನೈಸೇಶನ್ ಗಡುವನ್ನು RBI ಮೂರು ತಿಂಗಳವರೆಗೆ ವಿಸ್ತರಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್(RBI) ಶುಕ್ರವಾರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಟೋಕನೈಸೇಶನ್ ಗಡುವನ್ನು ಸೆಪ್ಟೆಂಬರ್ 30, 2022 ಕ್ಕೆ ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ. ಈ ಮೊದಲು ಜೂನ್ 30 ರ ಗಡುವನ್ನು ನಿಗದಿಪಡಿಸಿತ್ತು,

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಟೋಕನೈಸೇಶನ್ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಅದರ ಮೂಲಕ ಆನ್‌ ಲೈನ್ ವ್ಯಾಪಾರಿಗಳು ತಮ್ಮ ಗೌಪ್ಯತೆಯನ್ನು ರಕ್ಷಿಸಲು ಗ್ರಾಹಕರ ಡೇಟಾವನ್ನು ತಮ್ಮ ಸರ್ವರ್‌ ಗಳಲ್ಲಿ ಸಂಗ್ರಹಿಸಲು ಅನುಮತಿಸುವುದಿಲ್ಲ.

ಇದು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ, CVV, ಕಾರ್ಡ್ ಮುಕ್ತಾಯ ದಿನಾಂಕ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುತ್ತದೆ. ಕೇಂದ್ರೀಯ ಬ್ಯಾಂಕ್ ದೇಶೀಯ ಆನ್‌ಲೈನ್ ಖರೀದಿಗಳಿಗೆ ಅನ್ವಯವಾಗುವ ಕಾರ್ಡ್-ಆನ್-ಫೈಲ್(CoF) ಟೋಕನೈಸೇಶನ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...