alex Certify ನೀವು ಈ ಬ್ಯಾಂಕ್ ಗ್ರಾಹಕರಾಗಿದ್ದರೆ ಅವಶ್ಯಕವಾಗಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಈ ಬ್ಯಾಂಕ್ ಗ್ರಾಹಕರಾಗಿದ್ದರೆ ಅವಶ್ಯಕವಾಗಿ ಓದಿ

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಬ್ಯಾಂಕ್ ವಿಲೀನದ ನಂತರ ಈ ಎರಡು ಬ್ಯಾಂಕುಗಳ ಹಳೆಯ ಐಎಫ್‌ಎಸ್‌ಸಿ ಮತ್ತು ಎಂಐಸಿಆರ್ ಕೋಡ್  ಬದಲಾಗ್ತಿದೆ. ಗ್ರಾಹಕರಿಗೆ ಬ್ಯಾಂಕ್ ವ್ಯವಹಾರ ಮಾಡಲು ಹೊಸ ಕೋಡ್ ಅಗತ್ಯವಿದೆ. ಹಳೆಯ ಕೋಡ್‌ಗಳು ಮಾರ್ಚ್ 31,2021 ರ ನಂತರ ಕಾರ್ಯನಿರ್ವಹಿಸುವುದಿಲ್ಲ.

ಏಪ್ರಿಲ್ 1, 2020 ರಂದು ಸರ್ಕಾರ ದೇಶದ ಮೂರು ಬ್ಯಾಂಕುಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್  ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು ವಿಲೀನಗೊಳಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಪರವಾಗಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಹಳೆಯ ಚೆಕ್ ಬುಕ್ ಮತ್ತು ಐಎಫ್ಎಸ್ಸಿ / ಎಂಐಸಿಆರ್ ಕೋಡ್ ಮಾರ್ಚ್ 31 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಬ್ಯಾಂಕ್ ಹೇಳಿದೆ. ಈ ಬ್ಯಾಂಕ್ ಗ್ರಾಹಕರು ಹೊಸ ಕೋಡ್ ಮತ್ತು ಚೆಕ್ ಬುಕ್ ಪಡೆಯಬೇಕು.

ಗ್ರಾಹಕರು ಬ್ಯಾಂಕಿಗೆ ಹೋಗಿ ಹೊಸ ಚೆಕ್‌ಬುಕ್ ಪಡೆಯಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಟೋಲ್ ಫ್ರೀ ಸಂಖ್ಯೆ 18001802222/18001032222 ಗೆ ಕರೆ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...