alex Certify ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್: ವಿದೇಶಗಳಲ್ಲೂ ಪಾವತಿ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್: ವಿದೇಶಗಳಲ್ಲೂ ಪಾವತಿ ಸೌಲಭ್ಯ

ನವದೆಹಲಿ: ಭಾರತದ ಅತಿ ದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾದ ಫೋನ್ ಪೇ ವಿದೇಶಗಳಲ್ಲಿಯೂ ತನ್ನ ಸೇವೆ ಆರಂಭಿಸಿದೆ.

ಯುಪಿಐ ಆಧಾರಿತ ಹಣ ವರ್ಗಾವಣೆ ಆಪ್ ಫೋನ್ ಪೇ ವಿದೇಶದಲ್ಲೂ ಹಣ ಪಾವತಿಸುವ ವೈಶಿಷ್ಟವನ್ನು ಬಳಕೆದಾರರಿಗೆ ಪರಿಚಯಿಸಿದೆ. ಈ ಮಾದರಿಯ ಸೇವೆ ಒದಗಿಸುತ್ತಿರುವ ದೇಶದ ಮೊದಲ ಆಪ್ ಎಂಬ ಹಿರಿಮೆಗೆ ಫೋನ್ ಪೇ ಪಾತ್ರವಾಗಿದೆ.

ಅಂತರರಾಷ್ಟ್ರೀಯ ಡೆಬಿಟ್ ಕಾರ್ಡ್ ರೀತಿಯಲ್ಲಿಯೇ ಫೋನ್ ಪೇ ಕಾರ್ಯ ನಿರ್ವಹಿಸಲಿದೆ. ಈ ಅಪ್ಲಿಕೇಶನ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದೇಶಗಳಲ್ಲಿ ಹಣ ಪಾವತಿಸಿದಾಗ ಅಲ್ಲಿನ ಹಣದ ಮೌಲ್ಯವೇ ಸಂದಾಯವಾಗುತ್ತದೆ. ಇದರಿಂದ ವಿದೇಶಿ ಪ್ರಯಾಣ ಕೈಗೊಳ್ಳುವ ಭಾರತೀಯರಿಗೆ ಅನುಕೂಲವಾಗಲಿದೆ. ಆರಂಭಿಕವಾಗಿ ಸಿಂಗಾಪುರ, ಮಾರಿಷಸ್, ನೇಪಾಳ, ಯುಎಇ ಹಾಗೂ ಭೂತಾನ್ ದೇಶಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...