alex Certify ಪಿಂಚಣಿದಾರರಿಗೆ ಸಿಹಿ ಸುದ್ದಿ: 73 ಲಕ್ಷ ಪಿಂಚಣಿದಾರರಿಗೆ ಏಕಕಾಲಕ್ಕೆ ಪೆನ್ಷನ್ ಬಟವಾಡೆಗೆ ಕೇಂದ್ರೀಯ ವ್ಯವಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಂಚಣಿದಾರರಿಗೆ ಸಿಹಿ ಸುದ್ದಿ: 73 ಲಕ್ಷ ಪಿಂಚಣಿದಾರರಿಗೆ ಏಕಕಾಲಕ್ಕೆ ಪೆನ್ಷನ್ ಬಟವಾಡೆಗೆ ಕೇಂದ್ರೀಯ ವ್ಯವಸ್ಥೆ

ನವದೆಹಲಿ: ಪಿಂಚಣಿ ವಿತರಣೆಗೆ ಕೇಂದ್ರೀಯ ವ್ಯವಸ್ಥೆ ರಚಿಸಲು ಕಾರ್ಮಿಕರ ಭವಿಷ್ಯನಿಧಿ ಕಚೇರಿ ಮುಂದಾಗಿದೆ. 73 ಲಕ್ಷ ನಿವೃತ್ತರ ಬ್ಯಾಂಕ್ ಖಾತೆಗೆ ಏಕಕಾಲದಲ್ಲಿ ಪಿಂಚಣಿ ಜಮೆ ಮಾಡಲಾಗುತ್ತದೆ.

ಪ್ರಸ್ತುತ 138 ಪ್ರಾದೇಶಿಕ ಕಚೇರಿಗಳ ಮೂಲಕ ಪಿಂಚಣಿ ಬಟವಾಡೆಯಾಗುತ್ತಿದ್ದು, ಒಂದೊಂದು ಕಡೆ ಒಂದೊಂದು ದಿನ ಪಿಂಚಣಿದಾರರ ಖಾತೆಗೆ ಪಿಂಚಣಿ ಜಮಾ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಕಚೇರಿಯಿಂದ ಶೀಘ್ರದಲ್ಲಿಯೇ ಪಿಂಚಣಿ ಬಟವಾಡೆಗೆ ಕೇಂದ್ರೀಯ ವ್ಯವಸ್ಥೆಯನ್ನು ರಚಿಸಲಿದ್ದು, ಏಕಕಾಲದಲ್ಲಿ 73 ಲಕ್ಷ ಪಿಂಚಣಿದಾರರಿಗೆ ಪಿಂಚಣಿ ಜಮಾ ಮಾಡಲಾಗುವುದು.

ಜುಲೈ 29, 30ರಂದು ಕೇಂದ್ರೀಯ ಟ್ರಸ್ಟ್ ಮಂಡಳಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪಿಂಚಣಿ ವಿತರಣೆಗೆ ಕೇಂದ್ರೀಯ ವ್ಯವಸ್ಥೆ ಜಾರಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...