alex Certify ಈ ವರ್ಷ ಗೂಗಲ್​ನಲ್ಲಿ ಹುಡುಕಾಟಕ್ಕೊಳಗಾದ ಟಾಪ್​ 10 ಪ್ರಶ್ನೆಗಳಾವುವು ಗೊತ್ತಾ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷ ಗೂಗಲ್​ನಲ್ಲಿ ಹುಡುಕಾಟಕ್ಕೊಳಗಾದ ಟಾಪ್​ 10 ಪ್ರಶ್ನೆಗಳಾವುವು ಗೊತ್ತಾ?

ಗೂಗಲ್​ ಸಂಸ್ಥೆ ಬುಧವಾರ ಈ ವರ್ಷದ ಟಾಪ್​ 10 ಹುಡುಕಾಟದ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಟಾಪ್​ 10 ಪಟ್ಟಿಯಲ್ಲಿ ನಾಲ್ಕು ಸ್ಥಾನಗಳನ್ನ ಆಹಾರ ಪದಾರ್ಥಗಳು ಪಡೆದಿವೆ.

ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಬಾರಿ ಹುಡುಕಾಟ ಮಾಡಲ್ಪಟ್ಟ ಪ್ರಶ್ನೆ ಯಾವುದೆಂದರೆ ಪನ್ನೀರ್​ ಮಾಡುವುದು ಹೇಗೆ..? ಎಂಬುದು. ದ್ವಿತೀಯ ಸ್ಥಾನದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸೋದು ಹೇಗೆ ಎಂಬುದರ ಬಗ್ಗೆ ಹುಡುಕಾಟ ನಡೆಸಲಾಗಿದೆ. ಹಾಗೂ ಮೂರನೇ ಸ್ಥಾನವನ್ನ ಡಾಲ್ಗೋನಾ ಕಾಫಿ ಪಡೆದುಕೊಂಡಿದೆ.
ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಅನೇಕರು ಅಡುಗೆ ಮನೆಯಲ್ಲೇ ಹೆಚ್ಚಿನ ಕಾಲ ಕಳೆದಿದ್ದಾರೆ. ಸಿಹಿ ತಿಂಡಿಗಳ ಪೈಕಿ ಜಿಲೇಬಿ ಹಾಗೂ ಕೇಕ್​ ಮಾಡುವುದು ಹೇಗೆ ಎಂಬುದನ್ನ ಅತಿ ಹೆಚ್ಚು ಜನರು ಸರ್ಚ್ ಮಾಡಿದ್ದಾರೆ.
ಈ ಹೇಗೆ ಮಾಡೋದು ಎಂಬ ಪಟ್ಟಿಯಲ್ಲಿ ಸ್ಯಾನಿಟೈಸರ್​ ಕೂಡ ಸೇರಿಕೊಂಡಿದೆ. ಅನೇಕರು ಮನೆಯಲ್ಲೇ ಸ್ಯಾನಿಟೈಸರ್​ ತಯಾರಿಸೋದು ಹೇಗೆ ಅಂತಾನೂ ಹುಡುಕಾಟ ನಡೆಸಿದ್ದಾರಂತೆ . ಇನ್ನುಳಿದಂತೆ ಪ್ಯಾನ್​ ಕಾರ್ಡ್​ನ್ನು ಆಧಾರ್​ ಕಾರ್ಡ್​ಗೆ ಲಿಂಕ್​ ಮಾಡೋದು ಹೇಗೆ?, ಫ್ಯಾಸ್ಟ್ಯಾಗ್​ ರಿಚಾರ್ಜ್​, ಕೊರೊನಾ ವೈರಸ್​ ಸೇರಿದಂತೆ ಇನ್ನಿತರ ವಿಚಾರಗಳನ್ನ ಅತಿ ಹೆಚ್ಚು ಭಾರತೀಯರು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಾರೆ.
ಇನ್ನು ‘ಎಂದರೇನು..? ಎಂಬ ಪ್ರಶ್ನಾ ವಿಭಾಗದಲ್ಲಿ ಕೊರೊನಾ ವೈರಸ್​, ಬಿನೋದ್​, ಪ್ಲಾಸ್ಮಾ ಥೆರಪಿ, ಕೋವಿಡ್​ 19, ಸಿಎಎ, ಸೂರ್ಯ ಗ್ರಹಣ , ಎನ್​ಆರ್​ಸಿ , ಹ್ವಾಂಟಾ ವೈರಸ್​ ಹಾಗೂ ಸ್ವಜನ ಪಕ್ಷಪಾತ ಸ್ಥಾನ ಪಡೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...