alex Certify ಜುಲೈ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಓಲಾ ಇ ಸ್ಕೂಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಓಲಾ ಇ ಸ್ಕೂಟರ್

ಈ ವರ್ಷದ ಜುಲೈನಲ್ಲಿ ಮಾರುಕಟ್ಟೆಗೆ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನ ತರೋದಾಗಿ ಓಲಾ ಎಲೆಕ್ಟ್ರಿಕ್​ ಹೇಳಿದೆ. ಹೈಪರ್​ ಚಾರ್ಜರ್​ ನೆಟ್​ವರ್ಕ್ ಸ್ಥಾಪಿಸಲು ಮುಂದಾಗಿರುವ ಓಲಾ ಎಲೆಕ್ಟ್ರಿಕ್​ ದೇಶದ 400 ನಗರಗಳಲ್ಲಿ 1 ಲಕ್ಷ ಚಾರ್ಜಿಂಗ್​ ಪಾಯಿಂಟ್​ಗಳನ್ನ ನಿರ್ಮಿಸಲಿದೆ.

ಕಳೆದ ವರ್ಷ ತಮಿಳುನಾಡಿನಲ್ಲಿ ಮೊದಲ ಎಲೆಕ್ಟ್ರಿಕ್​ ಸ್ಕೂಟರ್​ ಕಾರ್ಖಾನೆ ಆರಂಭಿಸಿದ್ದ ಓಲಾ ಇದಕ್ಕಾಗಿ 2400 ಕೋಟಿ ರೂಪಾಯಿ ಬಂಡವಾಳ ಹೂಡಿದೆ. ಇದಾದ ಬಳಿಕ ಕಂಪನಿಯು 10 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ ನೀಡಲಿದೆ.

ನಾವು 2 ಮಿಲಿಯನ್​ ಸ್ಕೂಟರ್ಗಳನ್ನ ತಯಾರಿಸುವ ಸಾಮರ್ಥ್ಯ ಹೊಂದಿದ್ದೇವೆ. ಜೂನ್​ನಲ್ಲಿ ಕಾರ್ಖಾನೆ ಕಾರ್ಯ ಪೂರ್ಣಗೊಳ್ಳುತ್ತೆ ಹಾಗೂ ಜುಲೈನಿಂದ ಕಂಪನಿ ಸ್ಕೂಟರ್​ಗಳನ್ನ ಮಾರಾಟ ಮಾಡಲಿದೆ ಎಂದು ಓಲಾ ಚೇರ್​ಮನ್​​ ಹಾಗೂ ಗ್ರೂಪ್​ ಸಿಇಓ ಭವಿಶ್​ ಅಗರ್​ವಾಲ್​ ಹೇಳಿದ್ದಾರೆ. ಓಲಾ ಕಂಪನಿ ಇಲ್ಲಿಯವರೆಗೆ ಸ್ಕೂಟರ್​ ದರವನ್ನ ಬಹಿರಂಗಗೊಳಿಸಿಲ್ಲ.

ಎಲೆಕ್ಟ್ರಿಕ್​ ಸ್ಕೂಟರ್​ ಒಂದನ್ನೇ ಲಾಂಚ್​ ಮಾಡಿದರೆ ಸಾಲದು. ಸೂಕ್ತ ಸ್ಥಳಗಳಲ್ಲಿ ಚಾರ್ಜಿಂಗ್​ ನೆಟ್​ವರ್ಕ್​ಗಳೂ ಇವೆ. ಹೀಗಾಗಿ ಹೈಪರ್​ ಚಾರ್ಜರ್​ ನೆಟ್​ವರ್ಕ್​ಗಳ ಸ್ಥಾಪನೆಗೆ ಶ್ರಮಿಸುತ್ತಿದ್ದೇವೆ. ಸರಿ ಸುಮಾರು 400 ನಗರಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಚಾರ್ಜಿಂಗ್​ ಪಾಯಿಂಟ್​ಗಳನ್ನ ನಿರ್ಮಾಣ ಮಾಡಲಿದ್ದೇವೆ ಎಂದು ಭವಿಶ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...