alex Certify ಬೀಗರ ಮನೆ ಶೈಲಿಯ ಭೋಜನ ನೀಡುತ್ತಂತೆ ಈ ರೆಸ್ಟೊರೆಂಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಗರ ಮನೆ ಶೈಲಿಯ ಭೋಜನ ನೀಡುತ್ತಂತೆ ಈ ರೆಸ್ಟೊರೆಂಟ್​..!

ರಾಯಪುರದ ರೆಸ್ಟಾರೆಂಟ್​ವೊಂದು ತನ್ನ ಹೆಸರಿನ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡ್ತಿದೆ. ಬೀಗರ ಮನೆಯ ಊಟದ ಮಾದರಿ ಎಂದು ಈ ರೆಸ್ಟಾರೆಂಟ್​ ಮುಂದೆ ಬೋರ್ಡ್​ ಹಾಕಲಾಗಿದೆ.

ಪ್ರಿಯಾಂಕಾ ಶುಕ್ಲಾ ಎಂಬವರು ಟ್ವಿಟರ್​ನಲ್ಲಿ ಈ ರೆಸ್ಟಾರೆಂಟ್​ನ ಫೋಟೋ ಶೇರ್​ ಮಾಡಿದ್ದು, ಅನೇಕ ಕಡೆ ಮನೆ ಊಟ ಎಂದು ಬರೆದಿದ್ದನ್ನ ನೋಡಿದ್ದೇನೆ ಕೇಳಿದ್ದೇನೆ. ಆದರೆ ಬೀಗರ ಮನೆಯ ಊಟ ಎಂದು ಇದೇ ಮೊದಲ ಬಾರಿಗೆ ನೋಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಶ್ರೀ ಸುರುಚಿ ಹೆಸರಿನ ರೆಸ್ಟಾರೆಂಟ್​​ ಬೀಗರ ಮನೆ ಊಟ ಎಂಬ ಟ್ಯಾಗ್​ಲೈನ್​ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಮೆಂಟ್​ ಸೆಕ್ಷನ್​ನಲ್ಲಂತೂ ಜನರು ಹೋಟೆಲ್​ಗೆ ಬಂದವರೆಲ್ಲರನ್ನೂ ಅಳಿಯನಂತೆ ನೋಡಿಕೊಳ್ತೀರಾ ಎಂದು ಪ್ರಶ್ನೆ ಮಾಡ್ತಿದ್ದಾರೆ. ಇನ್ನು ಕೆಲವರು ಇದು ಹುಡುಗಿಯ ಬೀಗರ ಮನೆಯೋ ಹುಡುಗನದ್ದೋ ಎಂದೂ ಕೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...