alex Certify ಉದ್ಯೋಗ ಮಾಡುತ್ತಲೇ ಅಧ್ಯಯನ ಮಾಡುತ್ತಿರುವ ಯುವತಿ: ಸ್ಪೂರ್ತಿದಾಯಕ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಮಾಡುತ್ತಲೇ ಅಧ್ಯಯನ ಮಾಡುತ್ತಿರುವ ಯುವತಿ: ಸ್ಪೂರ್ತಿದಾಯಕ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ

ಹವ್ಯಾಸವನ್ನು ಮುಂದುವರಿಸಲು ಅಥವಾ ತಮ್ಮ ಕೆಲಸದ ಜೊತೆ ಅಧ್ಯಯನವನ್ನು ಮುಂದುವರಿಸಲು ಸಾಕಷ್ಟು ಸಮಯ ಇಲ್ಲ ಎಂದು ದೂರುವ ಜನರನ್ನು ನೀವು ಕಾಣಬಹುದು. ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಈ ಫೋಟೋ ಸಾಕ್ಷಿಯಾಗಿದೆ.

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ರಾಯ್‌ಪುರದ ಸಬ್‌ವೇ ಔಟ್‌ಲೆಟ್‌ನಲ್ಲಿ ಕ್ಲಿಕ್ ಮಾಡಲಾದ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಅಧ್ಯಯನ ಮಾಡುವುದನ್ನು ನೋಡಬಹುದು.

ಕರೀನಾ ಎಂಬ ಈ ಯುವತಿ ಅಂಬುಜಾ ಮಾಲ್‌ನಲ್ಲಿರುವ ಸಬ್‌ವೇ ಔಟ್‌ಲೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವಾರು ಗ್ರಾಹಕರಿಗೆ ಅಡುಗೆ ಮಾಡುವುದರ ಜೊತೆಗೆ ಸ್ವಲ್ಪ ಬಿಡುವು ಸಿಕ್ಕರೂ ಅಲ್ಲಿಯೇ ಪುಸ್ತಕ ಹಿಡಿದು ಅಧ್ಯಯನ ಮಾಡುತ್ತಾರೆ.

ಈ ಚಿತ್ರವನ್ನು ಶೇರ್‌ ಮಾಡಿಕೊಂಡಾಗಿನಿಂದ ಹಲವರು ಶ್ಲಾಘನೆಗಳ ಸುರಿಮಳೆಗೈಯುತ್ತಿದ್ದಾರೆ. ಇಂಥವರು ಅಲ್ಲಲ್ಲಿ ಕಾಣಸಿಗುತ್ತಾರೆ. ಇವರು ಎಲ್ಲರಿಗೂ ಮಾದರಿ ಎಂದು ಹಲವರು ಕಮೆಂಟ್‌ ಮೂಲಕ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...