ವಾಟ್ಸಾಪ್, ಹೊಸ ಸೇವಾ ನಿಯಮಗಳ ಬಗ್ಗೆ ಪ್ರಸ್ತಾಪ ಮಾಡಿದ ಬಳಿಕ ಜನರು ಬೇರೆ ಮೆಸೇಜಿಂಗ್ ಅಪ್ಲಿಕೇಶನ್ಗಳತ್ತ ಮುಖ ಮಾಡೋಕೆ ಶುರು ಮಾಡಿದ್ರು. ಈ ವೇಳೆಯಲ್ಲಿ ಸಿಗ್ನಲ್ ಆಪ್ ಜೊತೆ ಜೊತೆಗೆ ಫೇಮಸ್ ಆದ ಇನ್ನೊಂದು ಅಪ್ಲಿಕೇಶನ್ ಅಂದರೆ ಟೆಲಿಗ್ರಾಂ. ಈ ಅಪ್ಲಿಕೇಶನ್ನಲ್ಲಿ ಇರುವ ವಿಶೇಷವಾದ ಸೌಲಭ್ಯಗಳು ನಿಮ್ಮ ಮೆಸೇಜಿಂಗ್ಗೆ ಇನ್ನಷ್ಟು ಮಜಾ ನೀಡಲಿದೆ.
1. ಟೆಲಿಗ್ರಾಂನಲ್ಲಿ ನೀವು ಯಾರಿಗಾದರೂ ಫೋಟೋ ಹಾಗು ವಿಡಿಯೋಗಳನ್ನ ಕಳಿಸೋದಕ್ಕೂ ಮುನ್ನ ಎಡಿಟ್ ಮಾಡಬಹುದಾದ ಆಯ್ಕೆಗಳನ್ನ ನೀಡಲಾಗಿದೆ. ಸ್ಯಾಚುರೇಷನ್, ಕಾಂಟ್ರ್ಯಾಸ್ಟ್ , ಎಕ್ಸ್ಪ್ಲೋಶರ್ ಮಾತ್ರವಲ್ಲದೇ ಇನ್ನೂ ಹಲವು ಆಯ್ಕೆಗಳು ಲಭ್ಯವಿದೆ.
ಟೆಲಿಗ್ರಾಂನ ಬಿಲ್ಟ್ ಇನ್ ವಿಡಿಯೋ ಎಡಿಟಿಂಗ್ ಮೂಲಕ ನೀವು ಈ ಸೌಕರ್ಯ ಬಳಕೆ ಮಾಡಬಹುದು. ವಿಡಿಯೋ ಸೆಂಡ್ ಮಾಡೋಕೂ ಮುನ್ನ ನಿಮಗೆ ಕ್ರಾಪ್ ಎಂಬ ಆಯ್ಕೆ ಕಾಣಸಿಗಲಿದೆ. ಇಲ್ಲಿ ವಿಡಿಯೋ ಹಾಗೂ ಫೋಟೋಗಳನ್ನ ಸರಿಯಾಗಿ ಎಡಿಟ್ ಮಾಡಿ ಕಳಿಸಬಹುದು.
2. ಪ್ರಾಕ್ಸಿ ಸೇವೆ : ಟೆಲಿಗ್ರಾಂನಲ್ಲಿ ನಿಮಗೆ ಪ್ರಾಕ್ಸಿ ಸೇವೆ ಕೂಡ ಸಿಗುತ್ತೆ. ವಿಪಿಎನ್ ಕನೆಕ್ಷನ್ನಂತೆಯೇ ಈ ಆಯ್ಕೆ ಕಾರ್ಯ ನಿರ್ವಹಿಸುತ್ತೆ. ಆದರೆ ಪ್ರಾಕ್ಸಿ ವಿಪಿಎನ್ ಕನೆಕ್ಷನ್ನಷ್ಟು ಭದ್ರತೆಯನ್ನ ನೀಡೋದಿಲ್ಲ. ಈ ಆಯ್ಕೆ ಮೂಲಕ ನೀವು ನಿಮ್ಮ ಐಪಿ ಅಡ್ರೆಸ್ನ್ನು ಅಡಗಿಸಬಹುದಾಗಿದೆ.
ಸೆಟ್ಟಿಂಗ್ಸ್ನಲ್ಲಿ ಡಾಟಾ ಹಾಗೂ ಸ್ಟೋರೇಜ್ ಆಯ್ಕೆ ಮೇಲೆ ಕ್ಲಿಕ್ ಮಾಡಿ . ಇಲ್ಲಿ ಕೆಳಗಡೆ ನಿಮಗೆ ಪ್ರಾಕ್ಸಿ ಸೆಟ್ಟಿಂಗ್ ಪ್ಯಾನೆಲ್ ಕಾಣಸಿಗುತ್ತೆ. ಇದನ್ನ ಆನ್ ಮಾಡುವ ಮೂಲಕ ಈ ಸೌಲಭ್ಯವನ್ನ ಪಡೆಯಬಹುದಾಗಿದೆ.
3. ಸೆಟ್ ರಿಮೈಂಡರ್ : ಆಫೀಸ್ನಿಂದ ಯಾವುದೋ ಮುಖ್ಯವಾದ ಮೆಸೇಜೊಂದು ಬಂದಿರುತ್ತೆ. ನಿಮಗೆ ಅದನ್ನ ನೆನಪಿಟ್ಟುಕೊಳ್ಳೋದು ಸಾಧ್ಯವಿಲ್ಲ ಅಂದರೆ ನೀವು ಟೆಲಿಗ್ರಾಂನಲ್ಲಿ ಸೆಟ್ ರಿಮೈಂಡರ್ ಆಯ್ಕೆಯನ್ನ ಬಳಕೆ ಮಾಡಬಹುದು. ಈ ರಿಮೈಂಡರ್ ನೀವು ಹೇಳಿದ ದಿನದಂದು ನೀವು ಸೇವ್ ಮಾಡಿಟ್ಟ ಮೆಸೇಜ್ ಇಲ್ಲವೇ ಫೈಲ್ಗಳ ಬಗ್ಗೆ ಜ್ಞಾಪಕ ಮಾಡಿ ಕೊಡುತ್ತವೆ.
4. ಸ್ಲೋ ಮೋಡ್ ಗ್ರೂಪ್ಸ್ : ಟೆಲಿಗ್ರಾಂನಲ್ಲಿ ಗ್ರೂಪ್ಗಳನ್ನ ಕ್ರಿಯೇಟ್ ಮಾಡಿರ್ತೀರಿ. ಆದರೆ ಅಲ್ಲಿನ ಸದಸ್ಯರ ಸಾಲು ಸಾಲು ಮೆಸೇಜ್ಗಳು ನಿಮಗೆ ಕಿರಿಕಿರಿಯಾಗ್ತಿದ್ದರೆ ಗ್ರೂಪ್ ಅಡ್ಮಿನ್ ಆದ ನೀವು ಸ್ಲೋ ಮೋಡ್ ಇನ್ ಗ್ರೂಪ್ ಆಯ್ಕೆ ಕ್ಲಿಕ್ ಮಾಡಬಹುದು. ಈ ರೀತಿ ಮಾಡಿದರೆ ಪ್ರತಿ ಮೆಸೇಜ್ಗಳ ನಡುವೆ ಕನಿಷ್ಟ 30 ಸೆಕೆಂಡ್ಗಳ ಅಂತರ ಕಾಪಾಡಬಹುದಾಗಿದೆ.