alex Certify ಟೆಲಿಗ್ರಾಂನಲ್ಲಿರುವ ವಿಶೇಷ ಆಯ್ಕೆ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಲಿಗ್ರಾಂನಲ್ಲಿರುವ ವಿಶೇಷ ಆಯ್ಕೆ ಕುರಿತು ಇಲ್ಲಿದೆ ಮಾಹಿತಿ

ವಾಟ್ಸಾಪ್,​ ಹೊಸ ಸೇವಾ ನಿಯಮಗಳ ಬಗ್ಗೆ ಪ್ರಸ್ತಾಪ ಮಾಡಿದ ಬಳಿಕ ಜನರು ಬೇರೆ ಮೆಸೇಜಿಂಗ್​ ಅಪ್ಲಿಕೇಶನ್​​ಗಳತ್ತ ಮುಖ ಮಾಡೋಕೆ ಶುರು ಮಾಡಿದ್ರು. ಈ ವೇಳೆಯಲ್ಲಿ ಸಿಗ್ನಲ್​ ಆಪ್​ ಜೊತೆ ಜೊತೆಗೆ ಫೇಮಸ್​ ಆದ ಇನ್ನೊಂದು ಅಪ್ಲಿಕೇಶನ್​ ಅಂದರೆ ಟೆಲಿಗ್ರಾಂ. ಈ ಅಪ್ಲಿಕೇಶನ್​ನಲ್ಲಿ ಇರುವ ವಿಶೇಷವಾದ ಸೌಲಭ್ಯಗಳು ನಿಮ್ಮ ಮೆಸೇಜಿಂಗ್​​ಗೆ ಇನ್ನಷ್ಟು ಮಜಾ ನೀಡಲಿದೆ.

1. ಟೆಲಿಗ್ರಾಂನಲ್ಲಿ ನೀವು ಯಾರಿಗಾದರೂ ಫೋಟೋ ಹಾಗು ವಿಡಿಯೋಗಳನ್ನ ಕಳಿಸೋದಕ್ಕೂ ಮುನ್ನ ಎಡಿಟ್​ ಮಾಡಬಹುದಾದ ಆಯ್ಕೆಗಳನ್ನ ನೀಡಲಾಗಿದೆ. ಸ್ಯಾಚುರೇಷನ್​, ಕಾಂಟ್ರ್ಯಾಸ್ಟ್​ , ಎಕ್ಸ್​ಪ್ಲೋಶರ್​ ಮಾತ್ರವಲ್ಲದೇ ಇನ್ನೂ ಹಲವು ಆಯ್ಕೆಗಳು ಲಭ್ಯವಿದೆ.

ಟೆಲಿಗ್ರಾಂನ ಬಿಲ್ಟ್ ಇನ್​ ವಿಡಿಯೋ ಎಡಿಟಿಂಗ್​​ ಮೂಲಕ ನೀವು ಈ ಸೌಕರ್ಯ ಬಳಕೆ ಮಾಡಬಹುದು. ವಿಡಿಯೋ ಸೆಂಡ್​ ಮಾಡೋಕೂ ಮುನ್ನ ನಿಮಗೆ ಕ್ರಾಪ್​ ಎಂಬ ಆಯ್ಕೆ ಕಾಣಸಿಗಲಿದೆ. ಇಲ್ಲಿ ವಿಡಿಯೋ ಹಾಗೂ ಫೋಟೋಗಳನ್ನ ಸರಿಯಾಗಿ ಎಡಿಟ್​ ಮಾಡಿ ಕಳಿಸಬಹುದು.

2. ಪ್ರಾಕ್ಸಿ ಸೇವೆ : ಟೆಲಿಗ್ರಾಂನಲ್ಲಿ ನಿಮಗೆ ಪ್ರಾಕ್ಸಿ ಸೇವೆ ಕೂಡ ಸಿಗುತ್ತೆ. ವಿಪಿಎನ್​ ಕನೆಕ್ಷನ್​ನಂತೆಯೇ ಈ ಆಯ್ಕೆ ಕಾರ್ಯ ನಿರ್ವಹಿಸುತ್ತೆ. ಆದರೆ ಪ್ರಾಕ್ಸಿ ವಿಪಿಎನ್​ ಕನೆಕ್ಷನ್​ನಷ್ಟು ಭದ್ರತೆಯನ್ನ ನೀಡೋದಿಲ್ಲ. ಈ ಆಯ್ಕೆ ಮೂಲಕ ನೀವು ನಿಮ್ಮ ಐಪಿ ಅಡ್ರೆಸ್​ನ್ನು ಅಡಗಿಸಬಹುದಾಗಿದೆ.

ಸೆಟ್ಟಿಂಗ್ಸ್​ನಲ್ಲಿ ಡಾಟಾ ಹಾಗೂ ಸ್ಟೋರೇಜ್​ ಆಯ್ಕೆ ಮೇಲೆ ಕ್ಲಿಕ್​ ಮಾಡಿ . ಇಲ್ಲಿ ಕೆಳಗಡೆ ನಿಮಗೆ ಪ್ರಾಕ್ಸಿ ಸೆಟ್ಟಿಂಗ್​ ಪ್ಯಾನೆಲ್​ ಕಾಣಸಿಗುತ್ತೆ. ಇದನ್ನ ಆನ್​ ಮಾಡುವ ಮೂಲಕ ಈ ಸೌಲಭ್ಯವನ್ನ ಪಡೆಯಬಹುದಾಗಿದೆ.

3. ಸೆಟ್​ ರಿಮೈಂಡರ್​ : ಆಫೀಸ್​ನಿಂದ ಯಾವುದೋ ಮುಖ್ಯವಾದ ಮೆಸೇಜೊಂದು ಬಂದಿರುತ್ತೆ. ನಿಮಗೆ ಅದನ್ನ ನೆನಪಿಟ್ಟುಕೊಳ್ಳೋದು ಸಾಧ್ಯವಿಲ್ಲ ಅಂದರೆ ನೀವು ಟೆಲಿಗ್ರಾಂನಲ್ಲಿ ಸೆಟ್ ರಿಮೈಂಡರ್​ ಆಯ್ಕೆಯನ್ನ ಬಳಕೆ ಮಾಡಬಹುದು. ಈ ರಿಮೈಂಡರ್​ ನೀವು ಹೇಳಿದ ದಿನದಂದು ನೀವು ಸೇವ್​ ಮಾಡಿಟ್ಟ ಮೆಸೇಜ್​ ಇಲ್ಲವೇ ಫೈಲ್​ಗಳ ಬಗ್ಗೆ ಜ್ಞಾಪಕ ಮಾಡಿ ಕೊಡುತ್ತವೆ.

4. ಸ್ಲೋ ಮೋಡ್​ ಗ್ರೂಪ್ಸ್​​ : ಟೆಲಿಗ್ರಾಂನಲ್ಲಿ ಗ್ರೂಪ್​ಗಳನ್ನ ಕ್ರಿಯೇಟ್​ ಮಾಡಿರ್ತೀರಿ. ಆದರೆ ಅಲ್ಲಿನ ಸದಸ್ಯರ ಸಾಲು ಸಾಲು ಮೆಸೇಜ್​ಗಳು ನಿಮಗೆ ಕಿರಿಕಿರಿಯಾಗ್ತಿದ್ದರೆ ಗ್ರೂಪ್​ ಅಡ್ಮಿನ್​ ಆದ ನೀವು ಸ್ಲೋ ಮೋಡ್​ ಇನ್​ ಗ್ರೂಪ್​ ಆಯ್ಕೆ ಕ್ಲಿಕ್​ ಮಾಡಬಹುದು. ಈ ರೀತಿ ಮಾಡಿದರೆ ಪ್ರತಿ ಮೆಸೇಜ್​ಗಳ ನಡುವೆ ಕನಿಷ್ಟ 30 ಸೆಕೆಂಡ್​ಗಳ ಅಂತರ ಕಾಪಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...