alex Certify ಭಾರತೀಯರ ಸಹಕಾರದಿಂದ ʼಟೆಲಿಗ್ರಾಂʼ ಮಾಡಿದೆ ಈ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯರ ಸಹಕಾರದಿಂದ ʼಟೆಲಿಗ್ರಾಂʼ ಮಾಡಿದೆ ಈ ಸಾಧನೆ

ವಾಟ್ಸಾಪ್​ನ ಸೇವಾನಿಯಮದ ಬಳಿಕ ಉಂಟಾದ ವಿವಾದದ ಲಾಭ ಪಡೆದ ಟೆಲಿಗ್ರಾಂ ನಾಗಾಲೋಟದಲ್ಲಿ ಸಾಗುತ್ತಿದೆ. ಈ ಮೂಲಕ ಜನವರಿಯಿಂದ ಅತಿ ಹೆಚ್ಚು ಡೌನ್​ಲೋಡ್​ ಆದ ಅಪ್ಲಿಕೇಶನ್​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸೆಂಟರ್​ ಟವರ್​ ವರದಿಯ ಅನುಸಾರ ಟೆಲಿಗ್ರಾಂ ಜನವರಿ ತಿಂಗಳಾತ್ಯದ ವೇಳೆಗೆ ಒಟ್ಟು 69 ಮಿಲಿಯನ್​ ಡೌನ್​ಲೋಡ್​ ಕಂಡಿದೆ. ಇದು ಉಳಿದೆಲ್ಲ ಮೆಸೇಜಿಂಗ್ ಅಪ್ಲಿಕೇಶನ್​ಗೆ ಹೋಲಿಸಿದ್ರೆ ತುಂಬಾನೆ ಹೆಚ್ಚು.

ಅದರಲ್ಲೂ ಇನ್ನೊಂದು ವಿಶೇಷತೆ ಅಂದರೆ ಭಾರತದಲ್ಲಿ ಟೆಲಿಗ್ರಾಂ ಅತಿಹೆಚ್ಚು ಬಾರಿ ಅಂದರೆ 24 ಪ್ರತಿಶತ ಡೌನ್​ಲೋಡ್​​ ಆಗಿದೆ. ಭಾರತವನ್ನ ಬಿಟ್ಟರೆ ಇಂಡೋನೇಷಿಯಾ ಎರಡನೇ ಸ್ಥಾನದಲ್ಲಿದೆ. ಈ ದೇಶದಲ್ಲಿ 10 ಪ್ರತಿಶತ ಡೌನ್​ಲೋಡ್​ ಮಾಡಲಾಗಿದೆ.

ಹೀಗಾಗಿ ಟೆಲಿಗ್ರಾಂ ವಾಟ್ಸಾಪ್​ನ ವಿವಾದಿತ ಸೇವಾ ನಿಯಮದ ಲಾಭವನ್ನ ಪಡೆಯೋದರ ಜೊತೆಗೆ  ಭಾರತೀಯ ಬಳಕೆದಾರರ ನೆರವಿನಿಂದ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಜನವರಿ ತಿಂಗಳಲ್ಲಿ ಕೇವಲ ಭಾರತ ದೇಶದಲ್ಲೊಂದೇ ಟೆಲಿಗ್ರಾಂ 15 ಮಿಲಿಯನ್​ ಡೌನ್​ಲೋಡ್​ ಕಂಡಿದೆ. ಈ ಸಂಖ್ಯೆಯು ವಿಶ್ವ ಮಟ್ಟದಲ್ಲಿ ಅತಿ ಹೆಚ್ಚು ಡೌನ್​ಲೋಡ್​ ಕಾಣಲು ಟೆಲಿಗ್ರಾಂಗೆ ನೆರವಾಗಿದೆ.

ಇದಕ್ಕೂ ಮೊದಲು ಅಂದರೆ ನವೆಂಬರ್​ ಹಾಗೂ ಡಿಸೆಂಬರ್​ ತಿಂಗಳಲ್ಲಿ ಟೆಲಿಗ್ರಾಂ 9 ಹಾಗೂ 10ನೇ ಸ್ಥಾನದಲ್ಲಿತ್ತು. ಕಳೆದ ವರ್ಷ 58 ಮಿಲಿಯನ್​ ಡೌನ್​ಲೋಡ್​ ಮೂಲಕ ವಾಟ್ಸಾಪ್​ ನಂಬರ್ 1 ಸ್ಥಾನದಲ್ಲಿತ್ತು. ಈ ಹೊಸ ಸೇವಾ ನಿಯಮದ ವಿವಾದದ ಬಳಿಕ 5ನೇ ಸ್ಥಾನಕ್ಕೆ ಇಳಿದಿದೆ.

ಟೆಲಿಗ್ರಾಂ ಬಳಿಕ ಟಿಕ್​ಟಾಕ್​ ವಿಶ್ವದಲ್ಲಿ ಅತಿ ಹೆಚ್ಚು ಡೌನ್​ಲೋಡ್​ ಕಂಡಿದೆ. ಈ ಚೀನಿ ಅಪ್ಲಿಕೇಶನ್​​ 62 ಮಿಲಿಯನ್ ಡೌನ್​ಲೋಡ್​ ಹೊಂದಿದೆ. ಟಿಕ್​ಟಾಕ್​ ಬಳಕೆದಾರರು ಚೀನಾ ಹಾಗೂ ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.  ಇನ್ನು ಮೂರನೇ ಸ್ಥಾನದಲ್ಲಿ ಸಿಗ್ನಲ್​ ಅಪ್ಲಿಕೇಶನ್​ ಹಾಗೂ ನಾಲ್ಕನೇ ಸ್ಥಾನದಲ್ಲಿ ಫೇಸ್​ಬುಕ್​​ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...