alex Certify ಕಮಾಲ್ ಮಾಡಿದ ಮೊಟೊ ಜಿ8 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಮಾಲ್ ಮಾಡಿದ ಮೊಟೊ ಜಿ8

Motorola Moto G8 Power Lite sells out within 20 seconds in India ...

ಮೊಟೊರೊಲಾ ತನ್ನ 5000 ಎಂಎಹೆಚ್ ಬ್ಯಾಟರಿ ಸ್ಮಾರ್ಟ್ಫೋನ್ ಮೊಟೊ ಜಿ 8 ಪವರ್ ಲೈಟ್ ಅನ್ನು ಮೇ 21 ರಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೇ 29 ರಂದು ಈ ಬಜೆಟ್ ಸ್ಮಾರ್ಟ್ಫೋನ್ ಸೇಲ್ ನಡೆದಿದೆ. ಈ ಫೋನ್  ಅಭಿಮಾನಿಗಳಿಗೆ ಇಷ್ಟವಾಗಿದೆ. ಸೇಲ್ ನಲ್ಲಿ 20 ಸೆಕೆಂಡುಗಳಲ್ಲಿ ಎಲ್ಲ ಸ್ಟಾಕ್ ಖಾಲಿಯಾಗಿದೆ.

ಈ ಫೋನ್ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತಿದೆ. ಫೋನ್‌ನ ಬೆಲೆ 8,999 ರೂಪಾಯಿ  ಈ ಫೋನ್ Narzo 10A ಮತ್ತು ರೆಡ್ಮಿ 8 ನಂತಹ ಸ್ಮಾರ್ಟ್ಫೋನ್ಗಳೊಂದಿಗೆ ನೇರ ಸ್ಪರ್ಧೆ ನೀಡ್ತಿದೆ. ಒಮ್ಮೆ ಬ್ಯಾಟರಿ ಫುಲ್ ಚಾರ್ಜ್ ಮಾಡಿದ್ರೆ 3 ದಿನಗಳವರೆಗೆ ಬರಲಿದೆ. ಈ ಫೋನ್‌ನಿಂದ 19 ಗಂಟೆಗಳ ಕಾಲ ವೀಡಿಯೊ ಮತ್ತು 100 ಗಂಟೆಗಳ ಕಾಲ ಹಾಡನ್ನು ಕೇಳಬಹುದು.

ಈ ಫೋನ್ ಗೆ 4ಜಿಬಿ ರ್ಯಾಮ್ ಹಾಗೂ 64 ಜಿಬಿ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಮೈಕ್ರೊ ಎಸ್ಡಿ ಕಾರ್ಡ್ ಸಹಾಯದಿಂದ  256 ಜಿಬಿಗೆ ಹೆಚ್ಚಿಸಬಹುದು. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಮೋಟೋ ಜಿ 8 ಪವರ್ ಲೈಟ್‌ನಲ್ಲಿ ನೀಡಲಾಗಿದೆ. ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...