alex Certify ಹೊಸ ವರ್ಷಕ್ಕೆ ಟ್ರಾಕ್ಟರ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದ ರೈತರಿಗೆ ಬಿಗ್‌ ಶಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಟ್ರಾಕ್ಟರ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದ ರೈತರಿಗೆ ಬಿಗ್‌ ಶಾಕ್…!

ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ ಮುಂದಿನ ವರ್ಷದಿಂದ ಕಾರುಗಳ ಬೆಲೆ ಏರಿಕೆ ಮಾಡೋದಾಗಿ ಹೇಳಿದ್ದ ಮಹೀಂದ್ರ & ಮಹೀಂದ್ರಾ ಕಂಪನಿ ಇದೀಗ ಕಾರಿನ ಜೊತೆ ಜೊತೆಗೆ ವಾಣಿಜ್ಯಾತ್ಮಕ ಉದ್ದೇಶಕ್ಕೆ ಬಳಕೆಯಾಗುವ ವಾಹನಗಳ ಬೆಲೆ ಏರಿಕೆಗೂ ಸಿದ್ಧತೆ ನಡೆಸಿದೆ. ಇದರನ್ವಯ ಕಾರಿನ ಜೊತೆ ಜೊತೆಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್​ಗಳ ಬೆಲೆಯೂ ಜನವರಿ 1ರಿಂದ ಏರಿಕೆಯಾಗಲಿದೆ.‌

ಮಹೀಂದ್ರ ಕಂಪನಿಯ ಟ್ರ್ಯಾಕ್ಟರ್​ಗಳು ಭಾರೀ ಜನಪ್ರಿಯವಾಗಿವೆ. ಟ್ರ್ಯಾಕ್ಟರ್​ ಉದ್ಯಮದ ಮೂಲಕವೇ ಮಹೀಂದ್ರಾ ಅತಿ ಹೆಚ್ಚು ಲಾಭವನ್ನೂ ಪಡೆದಿದೆ. ನವೆಂಬರ್​ 2019ರಲ್ಲಿ ಮಹೀಂದ್ರಾ 20,414 ಟ್ರ್ಯಾಕ್ಟರ್​ಗಳನ್ನ ಮಾರಾಟ ಮಾಡಿತ್ತು. ಅದೇ ನವೆಂಬರ್​ 2020ರ ವೇಳೆಗೆ 31,619 ಟ್ರ್ಯಾಕ್ಟರ್​ಗಳನ್ನ ಮಾರಾಟ ಮಾಡುವ ಮೂಲಕ 55 ಪ್ರತಿಶತ ಏರಿಕೆ ಕಂಡಿದೆ.

ಟ್ರ್ಯಾಕ್ಟರ್​ ಉದ್ಯಮದಲ್ಲಿ ಇನ್ನಷ್ಟು ಸುಧಾರಣೆ ತರೋಕೆ ಮಹೀಂದ್ರಾ & ಮಹೀಂದ್ರಾ ಕಂಪನಿ ಚಿಂತನೆ ನಡೆಸಿದೆ. ವಿಶೇಷವಾಗಿ ಕೆ 2 ಶ್ರೇಣಿಯ ಟ್ರ್ಯಾಕ್ಟರ್​ಗಳನ್ನ ತೆಲಂಗಾಣದ ಜಹೀರಾಬಾದ್​ ಉತ್ಪಾದನಾ ಕೇಂದ್ರದಲ್ಲಿ ತಯಾರಿಸುವ ಯೋಜನೆ ಹೊಂದಿದೆ. ಈ ಹೊಸ ಶ್ರೇಣಿಗಾಗಿ ಮಹೀಂದ್ರಾ 100 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...