alex Certify ಲಾಕ್‌ ಡೌನ್‌ ಸಂಕಷ್ಟದ ನಡುವೆಯೂ ಗ್ರಾಹಕರಿಗೆ ಸಿಹಿ ಸುದ್ದಿ: ಇಳಿಕೆಯಾಯ್ತು ‘ಸಿಲಿಂಡರ್’ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್‌ ಸಂಕಷ್ಟದ ನಡುವೆಯೂ ಗ್ರಾಹಕರಿಗೆ ಸಿಹಿ ಸುದ್ದಿ: ಇಳಿಕೆಯಾಯ್ತು ‘ಸಿಲಿಂಡರ್’ ಬೆಲೆ

LPG Gas Cylinder Price January 2020 - Subsidy / Non Subsidy Rates

ಕೊರೊನಾ, ಲಾಕ್ ಡೌನ್, ಆರ್ಥಿಕ ಮುಗ್ಗಟ್ಟಿನ ಮಧ್ಯೆ ಜನ ಸಾಮಾನ್ಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಅಡುಗೆ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿವೆ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 162.5 ರೂಪಾಯಿ ಇಳಿದಿದೆ. ಈಗ ಹೊಸ ಬೆಲೆ 581.50 ರೂಪಾಯಿಯಾಗಿದೆ.

19 ಕೆಜಿ ಸಿಲಿಂಡರ್ ಬೆಲೆ 256 ರೂಪಾಯಿ ಇಳಿಕೆ ಕಂಡಿದ್ದು, ಹೊಸ ಬೆಲೆ 1029.50 ರೂಪಾಯಿಯಾಗಿದೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 744 ರೂಪಾಯಿಯಾಗಿತ್ತು. ಹೊಸ ಬೆಲೆ ಮೇ.1ರಿಂದಲೇ ಜಾರಿಗೆ ಬಂದಿದೆ.

ಇನ್ನು ಲಾಕ್ ಡೌನ್ ಜಾರಿಯಾಗಿ 38 ದಿನಗಳ ಕಳೆದಿವೆ. ಸತತ 38 ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 69.59 ರೂಪಾಯಿ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 62.29 ರೂಪಾಯಿಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...