alex Certify ಶುಭ ಸುದ್ದಿ: 400 ರೂ. ಇಳಿಕೆಯಾಯ್ತು LPG ಸಿಲಿಂಡರ್ ದರ: ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ: 400 ರೂ. ಇಳಿಕೆಯಾಯ್ತು LPG ಸಿಲಿಂಡರ್ ದರ: ಇಲ್ಲಿದೆ ಮಾಹಿತಿ

ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 200 ರೂ. ಕಡಿತಗೊಳಿಸಲಾಗಿದ್ದು, ಪ್ರತಿ ಕುಟುಂಬಕ್ಕೂ ದೊಡ್ಡ ಪರಿಹಾರವಾಗಿದೆ. ಈ ನಿರ್ಧಾರದಿಂದ ದೇಶಾದ್ಯಂತ ಸುಮಾರು 33 ಕೋಟಿ ಗ್ರಾಹಕರಿಗೆ ಲಾಭವಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಈ ನಿರ್ಧಾರದ ಮೂಲಕ ಪ್ರಧಾನಿ ಮೋದಿ ದೇಶದ ಕೋಟ್ಯಂತರ ಸಹೋದರಿಯರಿಗೆ ರಕ್ಷಾ ಬಂಧನ ಮತ್ತು ಓಣಂ ಉಡುಗೊರೆ ನೀಡಿದ್ದಾರೆ. ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

ಉಜ್ವಲ ಯೋಜನೆಯಡಿ ಫಲಾನುಭವಿಗಳು ಸೇರಿದಂತೆ ಎಲ್‌ಪಿಜಿ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗೆ ರೂ 200 ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ದೇಶಾದ್ಯಂತ ಸುಮಾರು 33 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳ ಗ್ರಾಹಕರಿಗೆ ಪ್ರಯೋಜನವಾಗಲಿದೆ.

ಉಜ್ವಲ ಯೋಜನೆಯ ಎಲ್‌ಪಿಜಿ ಗ್ರಾಹಕರಿಗೂ ಇದು ಅನ್ವಯವಾಗಲಿದೆ. ಮಾಹಿತಿಯ ಪ್ರಕಾರ, ಉಜ್ವಲ ಯೋಜನೆಯ ಗ್ರಾಹಕರು ಈಗಾಗಲೇ ಪ್ರತಿ ಸಿಲಿಂಡರ್‌ಗೆ 200 ರೂ. ಸಬ್ಸಿಡಿ ಪಡೆಯುತ್ತಿದ್ದರು. 200 ರೂ. ಹೆಚ್ಚುವರಿ ಬೆಲೆ ಕಡಿತದ ನಂತರ ಸಬ್ಸಿಡಿ 400 ರೂ.ಗೆ ಹೆಚ್ಚಳ ಆಗಲಿದೆ. ಅಂದರೆ ಸಿಲಿಂಡರ್ ಗೆ 400 ರೂ. ಕಡಿಮೆಯಾಗಲಿದೆ.

ಇನ್ನು ಉಜ್ವಲ ಫಲಾನುಭವಿಗಳಿಗೆ 700 ರೂ.ಗೆ ಅಡುಗೆ ಅನಿಲ ಸಿಗಲಿದ್ದು, ಉಳಿದ ಎಲ್ಲ ಗ್ರಾಹಕರಿಗೆ 900 ರೂ.ಗೆ ಅಡುಗೆ ಅನಿಲ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...