alex Certify ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ನೀವು ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ನೋಡುತ್ತಿದ್ದೀರಾ? ಹಾಗಾದರೆ ನೀವು ಈ ಸಣ್ಣಪುಟ್ಟ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಇನ್ನೂ ಅಂಬೆಗಾಲಿಡುತ್ತಿದ್ದರೂ ಸಹ ಬೇಡಿಕೆ ಮಾತ್ರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಆದರೂ ಸಹ ಮಾರುಕಟ್ಟೆಯಲ್ಲಿ ಸೀಮಿತವಾಗಿ ಲಭ್ಯವಿರುವ ಕಾರಣ ಒಂದು ವೇಳೆ ನೀವೇನಾದರೂ ಬಳಸಿದ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವುದಾದರೆ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ.

* ಎಲೆಕ್ಟ್ರಿಕ್ ವಾಹನಗಳು ಬೇಗನೇ ಮೌಲ್ಯ ಕಳೆದುಕೊಳ್ಳುತ್ತವೆ. ಇಂಧನ ಚಾಲಿತ ವಾಹನಗಳಿಗಿಂತಲೂ ವೇಗವಾಗಿ ಎಲೆಕ್ಟ್ರಿಕ್ ವಾಹನಗಳ ಮೌಲ್ಯ ಕುಸಿಯುತ್ತದೆ. ಅಂದರೆ, ಪೆಟ್ರೋಲ್/ಡೀಸೆಲ್ ಚಾಲಿತ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳು ಅಗ್ಗವಾಗಿ ಸೆಕೆಂಡ್ ಹ್ಯಾಂಡ್‌ಗೆ ಸಿಗುತ್ತವೆ.

ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೋವಿಡ್ ಟೆಸ್ಟ್ ಮಾಡಲು ಮುಂದಾದ ಬಿಬಿಎಂಪಿ ಸಿಬ್ಬಂದಿ

* ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳು ಪಳೆಯುಳಿಕೆ ಇಂಧನ ಚಾಲಿತ ವಾಹನಗಳಿಗಿಂತ ಆರಾಮಾವಾದ ಚಾಲನಾ ಅನುಭವ ನೀಡುತ್ತವೆ. ಈ ವಾಹನಗಳು ಚಲನೆಯಲ್ಲಿರುವಾಗ ಸದ್ದು ಮಾಡದೇ ಇರುವ ಕಾರಣ, ಶಾಂತಚಿತ್ತವಾಗಿ ಓಡಿಸಿಕೊಂಡು ಹೋಗಬಹುದು.

* ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಮಾಲಿನ್ಯಕಾರಕಗಳನ್ನು ಎಲೆಕ್ಟ್ರಿಕ್ ವಾಹನಗಳು ಹೊರಸೂಸುವುದಿಲ್ಲ. ಹಾಗಾಗಿ, ಪರಿಸರ ಜಾಗೃತ ಗ್ರಾಹಕರು ಪಳೆಯುಳಿಕೆ ಇಂಧನ ಚಾಲಿತ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಇಚ್ಛಿಸುತ್ತಾರೆ.

* ಇಂಧನ ಬೆಲೆಗಳು ದಿನೇದಿನೇ ಏರಿಕೆಯಾಗುತ್ತಿರುವ ಕಾರಣ ಎಲೆಕ್ಟ್ರಿಕ್ ವಾಹನಗಳ ಖರೀದಿ ಹಾಗೂ ನಿರ್ವಹಣೆ ತುಲಾತ್ಮಕವಾಗಿ ಅಗ್ಗವಾಗಿಯೇ ಇರುತ್ತದೆ.

ಬಸ್ ಪಾಸ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಈ ಬಾರಿ ರಿಯಾಯ್ತಿ, ಸಹಾಯಧನ ಇಲ್ಲ: ಸಾರಿಗೆ ನೌಕರರಿಗೆ ಸಿಹಿ ಸುದ್ದಿ

*ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರಗಳು ಸಬ್ಸಿಡಿಗಳನ್ನು ಕೊಡುತ್ತವೆ. ಫೇಮ್-2 ಸ್ಕೀಂ ಅಡಿ ಎಲೆಕ್ಟ್ರಿಕ್ ಕಾರುಗಳ ಖರೀದಿ ವೇಳೆ ಈ ವಿನಾಯಿತಿ ಪಡೆಯಬಹುದಾಗಿದೆ.

* ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಪ್ರದರ್ಶನವು ಪಳೆಯುಳಿಕೆ ಇಂಧನಗಳಿಗಿಂತ ಕಡಿಮೆ ಇದ್ದು, ಕಡಿಮೆ ವೋಲ್ಟೇಜ್‌ ಇದ್ದಲ್ಲಿ ಬ್ಯಾಟರಿ ಕ್ಷಮತೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

* ಎಲೆಕ್ಟ್ರಿಕ್ ವಾಹನಗಳ ಮಾಲೀಕರಿಗೆ ಇರುವ ಅತಿ ದೊಡ್ಡ ತಲೆನೋವೆಂದರೆ, ಚಾರ್ಜಿಂಗ್ ಮಾಡಿಕೊಳ್ಳಲು ಮೂಲ ಸೌಕರ್ಯದ ಕೊರತೆ. ಸಾರ್ವಜನಿಕ ಪ್ರದೇಶಗಳಲ್ಲಿ ಚಾರ್ಜಿಂಗ್ ವ್ಯವಸ್ಥೆಗಳ ಕೊರತೆ ಬಹಳ ದೊಡ್ಡ ತಲೆನೋವಾಗಿದೆ.

* ಎಲೆಕ್ಟ್ರಿಕ್ ವಾಹನಗಳ ಸಂಬಂಧಿ ತಂತ್ರಜ್ಞಾನ ದಿನೇ ದಿನೇ ನವೀಕರಣಗೊಳುತ್ತಿರುವ ಕಾರಣ ನೀವು ಖರೀದಿ ಮಾಡುವ ಎಲೆಕ್ಟ್ರಿಕ್ ವಾಹನ ಬಲು ಬೇಗ ಔಟ್‌ಡೇಟೆಡ್ ಆಗುವ ಸಾಧ್ಯತೆ ಇದೆ.

ಎಲ್ಲ ಕಂಪನಿ ಬ್ಲೇಡ್ ವಿನ್ಯಾಸ ಒಂದೇ ರೀತಿ ಇರುತ್ತೆ ಏಕೆ ಗೊತ್ತಾ….?

* ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು ಸಾಮಾನ್ಯವಾಗಿ ಒಳ್ಳೆಯ ಬಾಳಿಕೆ ಬರುವುದಿಲ್ಲ. ಹಾಗಾಗಿ ನೀವೇನಾದರೂ ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ಇಚ್ಛಿಸಿದಲ್ಲಿ ಬ್ಯಾಟರಿ ಕ್ಷಮತೆ ಕಡಿಮೆಯಾಗಿರುವಂಥದ್ದನ್ನು ಖರೀದಿಸುವ ಸಾಧ್ಯತೆ ಹೆಚ್ಚು.

* ಎಲೆಕ್ಟ್ರಿಕ್ ವಾಹನಗಳಿಗೆ ಇತರೆ ವಾಹನಗಳಿಗೆ ಹೋಲಿಸಿದಲ್ಲಿ ಮರುಮಾರಾಟದ ಬೆಲೆ ಕಡಿಮೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...