alex Certify BIG NEWS: ಕೆಂಪು ವಲಯದಲ್ಲೂ ಶುರುವಾಗಲಿದೆ ಆನ್‌ ಲೈನ್ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆಂಪು ವಲಯದಲ್ಲೂ ಶುರುವಾಗಲಿದೆ ಆನ್‌ ಲೈನ್ ಸೇವೆ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇಂದಿನಿಂದ ಲಾಕ್ ಡೌನ್ 4 ಜಾರಿಗೆ ಬಂದಿದೆ. ಇದ್ರಲ್ಲಿ ಅನೇಕ ವಿನಾಯಿತಿ ನೀಡಲಾಗಿದೆ. ಕೆಂಪು ವಲಯದಲ್ಲೂ ಇ-ಕಾಮರ್ಸ್ ಕಂಪನಿಗಳಿಗೆ ಅನಿವಾರ್ಯವಲ್ಲದ ವಸ್ತುಗಳನ್ನು ಪೂರೈಸಲು ಅವಕಾಶ ನೀಡಲಾಗಿದೆ. ದೆಹಲಿಯಂತಹ ಕೆಂಪು ವಲಯದ ಜನರು ಮೊಬೈಲ್, ಟಿವಿ ಮತ್ತು ಅಗತ್ಯವಿರುವ ಇತರ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು.

ಅಂತಿಮ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ನೀಡಿದೆ. ಆಯಾ ರಾಜ್ಯಗಳ ನಿರ್ಧಾರ ನಂತ್ರ ಕಂಪನಿಗಳು ಆರ್ಡರ್ ತೆಗೆದುಕೊಳ್ಳಲು ಶುರು ಮಾಡಬಹುದು. ಲಾಕ್ ಡೌನ್ ನಾಲ್ಕರಲ್ಲೂ ಸರ್ಕಾರ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳಾಗಿ ವಿಂಗಡಿಸಿದೆ. ಕೆಲ ವಸ್ತುಗಳ ಮಾರಾಟ, ಸೇವೆಗೆ ಈಗಲೂ ನಿರ್ಬಂಧವಿದೆ. ಅದನ್ನು ಹೊರತುಪಡಿಸಿ ಬೇರೆ ವ್ಯವಹಾರಗಳನ್ನು ನಡೆಸಲು ಅನುಮತಿ ನೀಡಿದೆ. ಸಡಿಲಿಕೆ ಪಟ್ಟಿಯಲ್ಲಿ ಸರ್ಕಾರ ಆನ್ಲೈನ್ ಸೇವೆಗಳನ್ನು ತೆಗೆದುಹಾಕಿದೆ.

ಕಂಟೇನ್ಮೆಂಟ್ ವಲಯಗಳನ್ನು ಆಯಾ ರಾಜ್ಯ ಸರ್ಕಾರಗಳು ಗುರುತಿಸಬೇಕು. ಅಲ್ಲಿ ಹಿಂದಿನಂತೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೆ ಬರಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...